ಕಾರವಾರ : ಜೂನ್ 16 ರಂದು ವಿದ್ಯುತ್ ವ್ಯತ್ಯಯ

 ಕಾರವಾರ : ಜೂನ್ 16 ರಂದು  ವಿದ್ಯುತ್ ವ್ಯತ್ಯಯ
Share this post

ಕಾರವಾರ ಜೂ.14, 2021: ಉಪಕೇಂದ್ರ ಶೇಜವಾಡದ 33ಕೆವಿ ಕೋಣೆ ಮಾರ್ಗದ ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜೂನ್ 16 ರಂದು ಬೆಳಿಗ್ಗೆ 9. 30 ರಿಂದ ಮಧ್ಯಾಹ್ನ 1.30 ರವರೆಗೆ ಕಾರವಾರದ ಹಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ.

ಅಂದು ಕಾರವಾರ ನಗರ, ಕೋಡಿಭಾಗ, ಎನ್.ಹೆಚ್.17(ಎಮ್.ಜಿ.ರೋಡ್) ಬೈತಕೋಲ, ಹಬ್ಬುವಾಡಾ, ಬಿಣಗಾ ಸೇರಿದಂತೆ ಅಮದಳ್ಳಿ ಮತ್ತು ಚೆಂಡಿಯಾ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಮ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!