45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ದೃಢೀಕರಣ ಪತ್ರ ಅಗತ್ಯವಿಲ್ಲ

 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ದೃಢೀಕರಣ ಪತ್ರ ಅಗತ್ಯವಿಲ್ಲ
Share this post

ಉಡುಪಿ, ಜೂನ್ 07, 2021: ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಪಡೆಯುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಿಂದ ಅನೆಕ್ಟರ್-3 ನೀಡಲಾಗುತ್ತಿದೆ.

ಆದರೆ ಹೊರದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಲ್ಲಿ 45 ವರ್ಷ ಮೇಲ್ಪಟ್ಟವರು ಜಿಲ್ಲಾಧಿಕಾರಿ ಕಚೇರಿಗೆ ಅನಕ್ಟರ್ ಗಾಗಿ
ಬರುತ್ತಿದ್ದು, ಈ ವಯೋಮಾನದವರು ಅನಕ್ಟರ್-3 ಗಾಗಿ ಈ ಕಚೇರಿಗೆ ಬಾರದೆ, ನೇರವಾಗಿ ತಮ್ಮ ಸಮೀಪದ ಸರಕಾರಿ ಆಸ್ಪತ್ರೆ/ ಪ್ರಾಥಮಿಕ ಆರೋಗ್ಯದ ಲಸಿಕಾ ಕೇಂದ್ರಗಳಲ್ಲಿ ತಮ್ಮ ಪಾಸ್ ಪೋರ್ಟ್ ಅನ್ನು ಗುರುತಿನ ಚೀಟಿ (Identity Card)) ಆಗಿ ಬಳಸಿ ಲಸಿಕೆ ಪಡೆಯಲು ಪಡೆಯಬಹುದಾಗಿದೆ.

ಲಸಿಕೆ ಪಡೆಯುವ ಸಂದರ್ಭದಲ್ಲಿ Cowin ವೋರ್ಟ್ ನಲ್ಲಿ ಪಾಸ್‌ಪೋರ್ಟ್ ಅನ್ನು ಗುರುತಿನ ಚೀಟಿಯಾಗಿ (Identity
Card)) ದಾಖಲು ಮಾಡಿಸುವಂತೆ ಹಾಗೂ ಲಸಿಕೆ ಪಡೆಯುವಲ್ಲಿ ಗೊಂದಲಗಳಿದ್ದರೆ ದೂ.ಸಂ.0820-2574802 ಅಥವಾ
1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!