ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಧನಸಹಾಯ ಸೌಲಭ್ಯ
ಮಂಗಳೂರು, ಜೂನ್ 02, 2021: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ವರ್ಷದೊಳಗಿನ ಕೋವಿಡ್ ಬಾಧಿತ ಮತ್ತು ಸೋಂಕಿತ, ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಅಥವಾ ಏಕಪೋಷಕ ಮಕ್ಕಳಿಗೆ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿದೆ.
ಈವರೆಗಿನ ವರದಿ ಪ್ರಕಾರ ಜಿಲ್ಲೆಯಲ್ಲಿ ಕೋವಿಡ್ನಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳು ಇಲ್ಲ. ಒಬ್ಬ ಪೋಷಕರನ್ನು ಕಳೆದುಕೊಂಡ 17 ಕುಟುಂಬಗಳಲ್ಲಿ 29 ಏಕಪೋಷಕ ಮಕ್ಕಳ ಮಾಹಿತಿ ದೊರಕಿರುತ್ತದೆ. ಸದರಿ ಮಕ್ಕಳಿಗೆ ನಿಯಮಾನುಸಾರ ಪ್ರಾಯೋಜಕತ್ವ ಯೋಜನೆಯಡಿಯಲ್ಲಿ ಧನಸಹಾಯ ಸೌಲಭ್ಯವನ್ನು ಒದಗಿಸುವ ಬಗ್ಗೆ ಪ್ರಗತಿಯಲ್ಲಿದೆ.
ಕೋವಿಡ್-19ರ ಹರಡುವಿಕೆಯ ನಿಯಂತ್ರಣಕ್ಕಾಗಿ 18 ವರ್ಷದೊಳಗಿನ ರಕ್ಷಣೆ ಮತ್ತು ಪೋಷಣೆಗೆ ಒಳಗಾಗುವ ಮಕ್ಕಳಿಗೆ ವಸತಿ ನಿಲಯವನ್ನು ಒದಗಿಸುವುದಕ್ಕಾಗಿ ಸಾಮಾನ್ಯ ಕ್ವಾರಂಟೈನ್ ವ್ಯವಸ್ಥೆ ಮತ್ತು ಕೋವಿಡ್ ಸೋಂಕಿತ ಮಕ್ಕಳಿಗೆ ಪ್ರತ್ಯೇಕವಾದ ಕ್ವಾರಂಟೈನ್ ವ್ಯವಸ್ಥೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮಾರ್ಚ್ 1, 2020 ರಿಂದ ಇಲ್ಲಿಯವರೆಗೆ ಕೋವಿಡ್ನಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ ಅನಾಥ ಮತ್ತು ಏಕಪೋಷಕ ಹಾಗೂ ಸೋಂಕಿತ/ಬಾಧಿತ ಮತ್ತು ಕೋವಿಡ್ನ್ನು ಹೊರತುಪಡಿಸಿ ಇನ್ನಿತರ ಕಾರಣದಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಮತ್ತು ಏಕಪೋಷಕ ಮಕ್ಕಳ ಮಾಹಿತಿಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಂಗ್ರಹಿಸಲಾಗುತ್ತಿದೆ.
ಕೋವಿಡ್-19 ಸೋಂಕಿತ/ಬಾಧಿತ, ಕೋವಿಡ್-19 ನಿಂದ ತಂದೆ/ತಾಯಿಯರನ್ನು ಕಳೆದುಕೊಂಡ ಮತ್ತು ಏಕಪೋಷಕ ಹಾಗೂ ಪರಿತ್ಯಕ್ತ ಮಕ್ಕಳಿಗೆ ಆಹಾರ ಕಿಟ್ನ್ನು ಒದಗಿಸುವ ಬಗ್ಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುವುದು.
ಇಂತಹ ಮಕ್ಕಳ ಮಾಹಿತಿ ದೊರೆತಲ್ಲಿ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.ಸಂ: 0824-2440004
- ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ:0824-2485401,
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:0824-2451254,
- ಶಿಶು ಅಭಿವೃದ್ಧಿ ಯೋಜನೆ- ನಗರ(0824-2432809), ಗ್ರಾಮಾಂತರ (0824-2263199)
- ಬಂಟ್ವಾಳ (08255-232465)
- ವಿಟ್ಲ (08255-238080)
- ಪುತ್ತೂರು (08251-230388)
- ಬೆಳ್ತಂಗಡಿ (08256-232134)
- ಸುಳ್ಯ (08257-230239)
- ಜಿಲ್ಲೆಯ ಚೈಲ್ಡ್ಲೈನ್-1098