ಆಟೋರಿಕ್ಷಾ, ಕ್ಯಾಬ್ ಚಾಲಕರಿಗೆ ಕೋವಿಡ್ ಲಸಿಕೆ – ದಾಖಲೆ ಪರಿಶೀಲನೆ

 ಆಟೋರಿಕ್ಷಾ, ಕ್ಯಾಬ್ ಚಾಲಕರಿಗೆ ಕೋವಿಡ್ ಲಸಿಕೆ – ದಾಖಲೆ ಪರಿಶೀಲನೆ
Share this post

ಉಡುಪಿ  ಜೂನ್ 1, 2021: ಜಿಲ್ಲೆಯ ಸಾರಿಗೆ ಇಲಾಖೆ ವತಿಯಿಂದ 20 ರಿಂದ 44 ವರ್ಷದೊಳಗಿನ ಆಟೋರಿಕ್ಷಾ ಮತ್ತು ಮೋಟಾರ್ ಕ್ಯಾಬ್ ಚಾಲನಾ ಅನುಜ್ಞಾ ಪತ್ರ ಹೊಂದಿರುವ ಚಾಲಕರಿಗೆ ಕೋವಿಡ್ ಲಸಿಕಾಕರಣಕ್ಕಾಗಿ ದಾಖಲೆ ಪರಿಶೀಲನೆ ನಡೆಯಲಿದೆ.

ಜೂನ್ 2, 3 ಮತ್ತು 4 ರಂದು ಬೆಳಗ್ಗೆ 8 ಗಂಟೆಗೆ ಹೆಬ್ರಿಯ ಐ.ಬಿ ಬಳಿ ಮತ್ತು ಬೆಳಗ್ಗೆ 9.30 ಕ್ಕೆ ಕಾರ್ಕಳದ ಐ.ಬಿ. ಯ ಬಳಿ ಮೋಟಾರು ವಾಹನ ನಿರೀಕ್ಷಕ ವಿಶ್ವನಾಥ ನಾಯ್ಕ್, ಬೆಳಗ್ಗೆ 8 ಗಂಟೆಗೆ ಕುಂದಾಪುರ ಐ.ಬಿ. ಯ ಬಳಿ ಮತ್ತು 9.30 ಕ್ಕೆ ಬೈಂದೂರು ಐ.ಬಿ. ಯ ಸಮೀಪ ಮೋಟಾರು ವಾಹನ ನಿರೀಕ್ಷಕ ಮಾರುತಿ ನಾಯ್ಕ್, ಬ್ರಹ್ಮಾವರ ತಾಲೂಕು ಕಚೇರಿ ಬಳಿ ಬೆಳಗ್ಗೆ 8 ಗಂಟೆಗೆ ಮತ್ತು ಕಾಪು ತಾಲೂಕು ಸಮೀಪ ಬೆಳಗ್ಗೆ 9.30 ಕ್ಕೆ ಮೋಟಾರು ವಾಹನ ನಿರೀಕ್ಷಕ ಉದಯ ಕುಮಾರ್ ಕಾಮತ್ ಉಪಸ್ಥಿತರಿದ್ದು, ಚಾಲಕರ ಅನುಜ್ಞಾ ಪತ್ರವನ್ನು ಪರಿಶೀಲಿಸಿ, ದೃಢೀಕರಣ ಪತ್ರವನ್ನು ನೀಡಲಿದ್ದಾರೆ.

ಆಟೋರಿಕ್ಷಾ ಮತ್ತು ಮೋಟಾರ್ ಕ್ಯಾಬ್ ಚಾಲಕರು ಇದರ ಪ್ರಯೋಜನ ಪಡೆದು ಆದ್ಯತೆಯ ಮೇರೆಗೆ ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!