ಉತ್ತರ ಕನ್ನಡ: ಜೂನ್ 2 ರಂದು ಕ್ರೀಡಾಪಟುಗಳಿಗೆ ಲಸಿಕಾಕರಣ
![ಉತ್ತರ ಕನ್ನಡ: ಜೂನ್ 2 ರಂದು ಕ್ರೀಡಾಪಟುಗಳಿಗೆ ಲಸಿಕಾಕರಣ](https://thecanarapost.com/wp-content/uploads/2021/04/hakan-nural-Z2n-r7pg6kM-unsplash.jpg)
ಕಾರವಾರ ಮೇ 31, 2021: ಅಂತರ್ರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅದ್ಯತೆ ಮೇರೆಗೆ ಕೋವಿಡ್ ಲಸಿಕಾಕರಣವನ್ನು ಜೂನ್ 2 ರಂದು ಜಿಲ್ಲಾ ಹಾಗೂ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, 18 ರಿಂದ 44 ವರ್ಷ ವಯೋಮಿತಿಯ ಅರ್ಹ ಕ್ರೀಡಾಪಟುಗಳು ತಮ್ಮ ವಿವರಗಳನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಲ್ಲಿಸಿ ಪಡೆಯಬಹುದು ಎಂದು ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಪ್ರಕಟಣೆಯಲ್ಲಿ ತಳಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ-9480886551 ಸಂಪರ್ಕಿಸಬಹುದು.