ಮಂಗಳೂರು: ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು

 ಮಂಗಳೂರು: ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು
Share this post

ಮಂಗಳೂರು, ಮೇ 26, 2021: ಪ್ರಸ್ತುತ ಸಾಲಿನ ಮುಂಗಾರು ಹಂಗಾಮು ಆರಂಭಗೊಂಡಿದ್ದು, ಭತ್ತದ ಸಸಿ ಮಡಿ ಕಾರ್ಯಕ್ಕೆ ಸೂಕ್ತವಾದ ಸಮಯವಾಗಿದ್ದು, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಇರಿಸಲಾಗಿದೆ.

ಲಾಕ್‍ಡೌನ್ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಸಹ ಸಮರ್ಪಕವಾಗಿರುತ್ತದೆ.

ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರಪಟ್ಟಿ ವಿವರ ಇಂತಿವೆ:
ಕಂಪೆನಿವಾರು ರಸಗೊಬ್ಬರ  ದರಪಟ್ಟಿ (ರೂ/ಬ್ಯಾಗ್) ಗರಿಷ್ಠ ಮಾರಾಟ ದರ:
ರಸಗೊಬ್ಬರ 20:20:0:13- (ಕಂಪನಿ ಹೆಸರು) IFFCO -975 ರೂ, IPಐ -1050 ರೂ, IPL-1050 ರೂ, KRIBHCO-1090-ರೂ,CIL-1050 ರೂ,  STL-1150 ರೂ, MCF-1090 ರೂ,  PPCL-1090 ರೂ.
ರಸಗೊಬ್ಬರ 10:26:26-(ಕಂಪನಿ ಹೆಸರು) IIFFCO-1175 ರೂ, KRIBHCO-1300 ರೂ, ZACL-1375 ರೂ, CIL-1300 ರೂ,  STL-1390 ರೂ, MCF-1375 ರೂ,  PPCL-1375 ರೂ.
ರಸಗೊಬ್ಬರ 12:32:16-(ಕಂಪನಿ ಹೆಸರು) IFFCO -1185 ರೂ, KRIBHCO-1310 ರೂ, STL-1370 -ರೂ, MCF-1310 ರೂ,  PPCL-1310 ರೂ.
ರಸಗೊಬ್ಬರ ಡಿ.ಎ.ಪಿ-(ಕಂಪನಿ ಹೆಸರು) IIFFCO 1200 ರೂ, IPಐ -1200 ರೂ, IPL -1200 ರೂ, KRIBHCO-1200-ರೂ, ZACL-1200ರೂ, CIL-1200 ರೂ, STL-1200 ರೂ,  MCF-1200 ರೂಪಾಯಿ ನಿಗಧಿಸಲಾಗಿದೆ.
• ರಸಗೊಬ್ಬರ ಚೀಲದ ಮೇಲಿನ ದರಗಳನ್ನು ಪರಿಗಣಿಸದೆ ಸರ್ಕಾರದ ನಿರ್ದೇಶನದಂತೆ ಈ ಮೇಲಿನ ದರಗಳಲ್ಲಿಯೇ  ಕಡ್ಡಾಯವಾಗಿ ಮಾರಾಟ ಮಾಡಲು  ಸೂಚಿಸಿದೆ.

ತಳಿವಾರು ಭತ್ತದ ಬಿತ್ತನೆ ಬೀಜ ಸಹಾಯಧನ/ರೈತರ ವಂತಿಕೆ ವಿವರ (ರೂ.ಗಳಲ್ಲಿ)
MO4- ಪ್ರತಿ 25 ಕೆ.ಜಿ ಬ್ಯಾಗ್‍ಗೆ 775 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 575 ರೂ.
ಜಯ- ಪ್ರತಿ 25 ಕೆ.ಜಿ ಬ್ಯಾಗ್‍ಗೆ 750 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 550 ರೂ.

ಜ್ಯೋತಿ- ಪ್ರತಿ 25 ಕೆ.ಜಿ ಬ್ಯಾಗ್‍ಗೆ 825 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 625 ರೂ.
ಉಮಾ- ಪ್ರತಿ 25 ಕೆ.ಜಿ ಬ್ಯಾಗ್‍ಗೆ 800 ರೂ, ಸಹಾಯಧನ 200 ರೂ ಮತ್ತು ರೈತರ ವಂತಿಕೆ 600 ರೂಪಾಯಿ ನಿಗದಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!