ಉಡುಪಿ: ಕೋವ್ಯಾಕ್ಸಿನ್ 2 ನೇ ಡೋಸ್ ಲಸಿಕೆ ಲಭ್ಯ
ಉಡುಪಿ, ಮೇ 17, 2021: ಉಡುಪಿಯಲ್ಲಿ ಕೋವ್ಯಾಕ್ಸಿನ್ 2 ನೇ ಡೋಸ್ ಲಸಿಕೆಯನ್ನು ಮಾರ್ಚ್ 18 ರಂದು ನೀಡಲಾಗುವುದು.
ಉಡುಪಿ ನಗರ ಪ್ರದೇಶದಲ್ಲಿ ಮಾರ್ಚ್ 25 ಅಥವಾ ಅದಕ್ಕಿಂತ ಮೊದಲು 1 ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2 ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 110 ಡೋಸ್, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 70 ಡೋಸ್, ಎಫ್.ಪಿ.ಎ.ಐ ಕುಕ್ಕಿಕಟ್ಟೆ ಇಲ್ಲಿ 50 ಡೋಸ್ ಹಾಗೂ ಉಡುಪಿಯ ಬಿ.ಆರ್.ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 70 ಡೋಸ್ ಲಭ್ಯವಿದ್ದು, ಅದನ್ನು ಮೇ 18 ರಂದು ನೀಡಲಾಗುವುದು.
ಮಾರ್ಚ್ 25 ಅಥವಾ ಅದಕ್ಕಿಂತ ಮೊದಲು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಿಗೆ ಈಗಾಗಲೇ ಮೇ 14 ರಂದು ಎಸ್.ಎಮ್.ಎಸ್ ಕಳುಹಿಸಲಾಗಿದ್ದು, ಎಸ್.ಎಮ್.ಎಸ್ ಸಂದೇಶ ಇರುವ ಫಲಾನುಭವಿಗಳು ಮಾತ್ರ ಮೇಲೆ ತಿಳಿಸಿರುವ ಆಸ್ಪತ್ರೆಗೆ ಬಂದು ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಡಿ.ಹೆಚ್.ಓ ಡಾ.ಸುಧೀರ್ ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ 25 ಅಥವಾ ಅದಕ್ಕಿಂತ ಮೊದಲು 1 ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2 ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆದುಕೊಳ್ಳುವಂತೆ ಹಾಗೂ ಸಾರ್ವಜನಿಕರು ಸಹಕರಿಸುವಂತೆ ಡಿ.ಹೆಚ್.ಓ ಹೇಳಿದ್ದಾರೆ.