₹ 1.7 ಕೋಟಿ ರೂ. ವೆಚ್ಚದಲ್ಲಿ ನೂತನ ಮಂಗಳೂರು ರಥ ನಿರ್ಮಾಣ
ಮಂಗಳೂರು ಮೇ 15, 2021: ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ರಥದ ಮರದ ಮುಹೂರ್ತ ಪೂಜೆ ಅಕ್ಷಯ ತೃತೀಯದಂದು ನೆರವೇರಿತು.
ಇತಿಹಾಸ ಪ್ರಸಿದ್ಧ ಮಂಗಳೂರು ರಥಕ್ಕೆ 200 ವರ್ಷ ಆಗಿದ್ದು, ಸುಮಾರು ₹ 1.7 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಬ್ರಹ್ಮ ರಥ ನಿರ್ಮಾಣವಾಗಲಿದೆ.
Also read: Heavy rain in Udupi and Dakshina Kannada
ಕಾಷ್ಠ ಶಿಲ್ಪದಿಂದ ಕೂಡಿದ ನೂತನ ಬ್ರಹ್ಮ ರಥದ ನಿರ್ಮಾಣ ಕಾರ್ಯವು ಕೋಟೇಶ್ವರದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಶಾಲೆ ಯಲ್ಲಿ ಪ್ರಾರಂಭವಾಗಿದೆ. ಮುಂದಿನ ವರ್ಷ ಜರಗ ಲಿರುವ ಮಂಗಳೂರು ರಥೋತ್ಸವಕ್ಕೆ ನೂತನ ರಥ ನಿರ್ಮಾಣ ಪೂರ್ಣಗೊಂಡು ಶ್ರೀ ದೇವರಿಗೆ ಸಮರ್ಪಿಸಲಾಗುವುದು.
ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳಿಗೆ ಪರಿಹಾರವಿದೆ: ಡಿ. ವೀರೇಂದ್ರ ಹೆಗ್ಗಡೆ
ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ರಥ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು , ಶ್ರೀ ಗಳವರ ದಿವ್ಯ ಉಪಸ್ಥಿತಿಯಲ್ಲಿ ರಥ ಸಮರ್ಪಣೆ ಗೊಳ್ಳಲಿರುವುದು.
ಇದನ್ನೂ ಓದಿ: ವೆನ್ಲಾಕ್ ಗೆ 6 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಹಸ್ತಾಂತರಿಸಿದ ಸೇವ್ ಲೈಫ್ ಟ್ರಸ್ಟ್
ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ದೇವಳದ ತಂತ್ರಿಗಳಾದ ಕಾಶೀನಾಥ್ ಆಚಾರ್ಯ , ಲೆಕ್ಕ ಪರಿಶೋಧಕ ಎಂ . ಜಗನ್ನಾಥ್ ಕಾಮತ್ , ಡಿ ವಾಸುದೇವ್ ಕಾಮತ್ , ಜೀವನ್ ರಾಜ್ ಶೆಣೈ , ರಥಶಿಲ್ಪಿಗಳಾದ ಲಕ್ಷ್ಮಿ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತ್ರತ್ವದಲ್ಲಿ ನಿರ್ಮಾಣಗೊಳ್ಳಲಿದೆ.
ಚಿತ್ರ : ಮಂಜು ನೀರೇಶ್ವಾಲ್ಯ
- Udupi Mallige and Jaaji today’s price
- Today’s Rubber price at Rubber Society- Ujire
- Kateel Sri Durgaparameshwari today’s Alankara
- Daily Panchangam
- Sri Dharmasthala Mela Yakshagana show today
- Admissions Open for Kittur Rani Chennamma Residential School