ವೆನ್ಲಾಕ್ ಗೆ 6 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಹಸ್ತಾಂತರಿಸಿದ ಸೇವ್ ಲೈಫ್ ಟ್ರಸ್ಟ್
ಮಂಗಳೂರು, ಮೇ 15, 2021: ನಗರದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಇಂದು ಹಸ್ತಾಂತರಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಹಣ ಸಂಗ್ರಹಿಸಿ ವೈದ್ಯಕೀಯ ವೆಚ್ಚ ಭರಿಸುತಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ 10 ತಿಂಗಳಲ್ಲೂ 200 ಕ್ಕೂ ಅಧಿಕ ಮಂದಿಗೆ 1.1 ಕೋಟಿಗೂ ಅಧಿಕ ಮೊತ್ತ ನೆರವು ನೀಡಲಾಗಿದೆ. ಈ ಬಾರಿ ಮಂಗಳೂರು, ಬಂಟ್ವಾಳ, ಉಡುಪಿಯ 700 ಕುಟುಂಭಗಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗಿದೆ.
ಕೊರೋನಾ ಮಹಾಮಾರಿಯ ಎರಡನೇ ಅಲೆಯು ವಿಪರೀತವಾಗಿ ಹರಡುತ್ತಿದ್ದು, ರಾಜ್ಯಾ ದ್ಯಂತ ಕೈ ಮೀರಿಹೋಗಿರುತ್ತದೆ, ಈ ಪರಿಸ್ಥಿತಿಯನ್ನು ಮನಗಂಡು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೬ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ನೀಡಲಾಗಿದೆ.
ಈ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿಗಳು ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಡಿ ಎಂ ಓ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ , ಛಾಯಾಗ್ರಾಹಕ ಮಂಜು ನೀರೇಶ್ವಾಲ್ಯ , ರಮೇಶ್ ಶೆಣೈ ಉಪಸ್ಥಿತರಿದ್ದರು .