ಕರಡು ಮಾರ್ಗಸೂಚಿಗಳ ಬಗ್ಗೆ ಪ್ರತಿಕ್ರಿಯೆ ಆಹ್ವಾನಿಸಿದ ವಿಕಲಚೇತನರ ಸಬಲೀಕರಣ ಇಲಾಖೆ

 ಕರಡು ಮಾರ್ಗಸೂಚಿಗಳ ಬಗ್ಗೆ ಪ್ರತಿಕ್ರಿಯೆ ಆಹ್ವಾನಿಸಿದ ವಿಕಲಚೇತನರ ಸಬಲೀಕರಣ ಇಲಾಖೆ
Share this post

ನವದೆಹಲಿ, ಮೇ 12, 2021: ಭಾರತ ಸರಕಾರದ ವಿಕಲಚೇತನರ ಸಬಲೀಕರಣ ಇಲಾಖೆಯು ಆಗಸ್ಟ್ 29, 20218 ರಂದು (ದಿನಾಂಕ 8.2.2.2019ರ ತಿದ್ದುಪಡಿಯೊಂದಿಗೆ ) ನಿಗದಿತ ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ) ಲಿಖಿತ ಪರೀಕ್ಷೆ ನಡೆಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸರ್ವೋಚ್ಚ ನ್ಯಾಯಾಲಯವು ಶ್ರೀ ವಿಕಾಸ್ ಕುಮಾರ್ ವರ್ಸಸ್ ಯುಪಿಎಸ್‌ಸಿ ಮತ್ತು ಇತರರ ಪ್ರಕರಣದಲ್ಲಿ ಫೆಬ್ರವರಿ 11, 2021ರ ಆದೇಶದಲ್ಲಿ, ಶೇ. 40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಅಥವಾ ಪರೀಕ್ಷೆಯನ್ನು ಖುದ್ದು ಬರೆಯಲು ಸಾಧ್ಯವಾಗದ ವೈದ್ಯಕೀಯ ಸ್ಥಿತಿಯಲ್ಲಿರುವಂಥವರಿಗೆ, ಪರೀಕ್ಷೆ ಬರೆಯಲು ಬರಹಗಾರರ ನೇಮಕಕ್ಕೆ ಅನುಮತಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ಸಮಾಲೋಚನೆಯ ನಂತರ ಮಾರ್ಗಸೂಚಿಗಳನ್ನು ರೂಪಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದೆ.

ಈ ನಿಟ್ಟಿನಲ್ಲಿ ʼಡಿಇಪಿಡಬ್ಲ್ಯೂಡಿʼ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಇಲಾಖೆ ಕರಡು ಮಾರ್ಗಸೂಚಿಗಳನ್ನು ರೂಪಿಸಿದೆ.

ಇವುಗಳು https://drive.google.com/file/d/11wUZoURvO4gTgb0S2KmHTz9Roe8vK1qY/view ನಲ್ಲಿ ಲಭ್ಯವಿದೆ. ಈ ಕರಡು ಮಾರ್ಗಸೂಚಿಗಳು, ಲಿಖಿತ ಪರೀಕ್ಷೆಯನ್ನು ತೆಗೆದುಕೊಳ್ಳುವಾಗ ಅಂತಹ ಅಭ್ಯರ್ಥಿಗಳಿಗೆ ಬರಹಗಾರ/ಪರಿಹಾರಾರ್ಥ ಸಮಯದ ಸೌಲಭ್ಯವನ್ನು ಪಡೆಯಲು ಮಾನದಂಡಗಳನ್ನು ಒದಗಿಸುತ್ತವೆ. ಬರಹಗಾರನ ಅಗತ್ಯವನ್ನು ಪ್ರಮಾಣೀಕರಿಸಲು ವೈದ್ಯಕೀಯ ಪ್ರಾಧಿಕಾರದ ಸಂಯೋಜನೆಯನ್ನೂ ಇದು ಒಳಗೊಂಡಿದೆ.

ಇಲಾಖೆಯು ಈ ಕರಡು ಮಾರ್ಗಸೂಚಿಗಳ ಬಗ್ಗೆ ಅದನ್ನು ಅಂತಿಮಗೊಳಿಸುವ ಮೊದಲು ಅಂದರೆ ಜೂನ್ 1, 2021ರ ಒಳಗಾಗಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆಗಳನ್ನು [email protected] ಗೆ ಇಮೇಲ್ ಮೂಲಕ ಕಳುಹಿಸಬೇಕು ಮತ್ತು ನಿರ್ದೇಶಕರು, ನೀತಿ ವಿಭಾಗ, ಡಿಇಪಿಡಬ್ಲ್ಯೂಡಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಸಚಿವಾಲಯ, ಭಾರತ ಸರಕಾರ – ಇವರನ್ನು ಉದ್ದೇಶಿಸಿ ಬರೆಯಬೇಕು.

Subscribe to our newsletter!

Other related posts

error: Content is protected !!