ಉಡುಪಿ ನಗರಸಭೆ: ಖಾಲಿ ನಿವೇಶನ ತೆರಿಗೆ ಪಾವತಿಗೆ ಸೂಚನೆ

 ಉಡುಪಿ ನಗರಸಭೆ: ಖಾಲಿ ನಿವೇಶನ ತೆರಿಗೆ ಪಾವತಿಗೆ ಸೂಚನೆ
Share this post

ಉಡುಪಿ, ಎಪ್ರಿಲ್ 21, 2021: ಸರ್ಕಾರದ ಆದೇಶದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಆಸ್ತಿ ತೆರಿಗೆ ನಿರ್ಧರಣಾ ಪದ್ಧತಿ ಅಳವಡಿಸಲಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ನಿವೇಶನಕ್ಕೆ ಸಂಬAಧಿಸಿದಂತೆ ಕನಿಷ್ಟ 0.2% ತೆರಿಗೆ ಅಳವಡಿಸಿಕೊಳ್ಳಲಾಗಿದ್ದು, ಪ್ರಸ್ತಾವಿತ ಆಸ್ತಿ ತೆರಿಗೆಯು ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯನ್ವಯ ನಿರ್ಧರಿಸಲಾಗಿದ್ದು, ಚಾಲ್ತಿ ಸಾಲಿಗೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗಿರುತ್ತದೆ.

ಕಟ್ಟಡಕ್ಕೆ ಹೊಂದಿಕೊಂಡಿರುವ 1000 ಚ.ಅಡಿ ವರೆಗಿನ ಖಾಲಿ ಭೂಮಿಗೆ ತೆರಿಗೆ ವಿನಾಯಿತಿ ನೀಡಿ 1000 ಚ. ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಕ್ಕೆ ಸ್ವತ್ತಿನ ತೆರಿಗೆಯನ್ನು ಖಾಲಿ ನಿವೇಶನಕ್ಕೆ ವಿಧಿಸುವ ಆಸ್ತಿ ತೆರಿಗೆ ದರದಲ್ಲಿ ವಿಧಿಸಲಾಗುತ್ತಿದೆ.

ಕಟ್ಟಡಗಳಿಗೆ ಸಂಬAಧಿಸಿದಂತೆ ಚಾಲ್ತಿ ಸಾಲಿನ ಮಾರುಕಟ್ಟೆ ದರದನ್ವಯ (ನಿವೇಶನದ ಮೌಲ್ಯ) ರಸ್ತೆವಾರು, ಪ್ರದೇಶವಾರು, ನಿರ್ಮಾಣ ಸ್ವರೂಪದನ್ವಯ ದರ ನಿಗದಿಪಡಿಸಿದ್ದು, ಅದರಂತೆ ಸಾರ್ವಜನಿಕರು ಸದರಿ ಆಸ್ತಿ ತೆರಿಗೆಯನ್ನು ಪಾವತಿಸಿ, ನಗರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!