ಕೋವಿಡ್ ಎರಡನೇ ಅಲೆ ಬಿಸಿ: ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಬಿಗಿ ಕ್ರಮ
ಮಂಗಳೂರು, ಏಪ್ರಿಲ್ 02, 2021: ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿದ್ದು, ರಾಜ್ಯ ಸರ್ಕಾರ ಶುಕ್ರವಾರ ಹೊಸ ಆದೇಶ ಹೊರಡಿಸಿದೆ.
ಹೊಸ ಆದೇಶ ಪ್ರಕಾರ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆಯು ಶೇ ೫೦ ಮೀರುವಂತಿಲ್ಲ. ಈ ಜಿಲ್ಲೆಗಳ ಸಿನೆಮಾ ಹಾಲ್ ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ ಗರಿಷ್ಠ ಶೇ ೫೦ ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಿದೆ.
ಇಲ್ಲಿದೆ ಸಂಪೂರ್ಣ ಆದೇಶ
ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 1। ಹಾಗೂ 12
ನೇ. ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ, ತರಗತಿಗಳಿಗೆ
ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ.
ಉನ್ನತ ಶಿಕ್ಷಣ ಹಾಗೂ ವ್ರಿತ್ತಿಪರ ಕೋರ್ಸ್‌ಗಳೆ ತರಗತಿಗಳಲ್ಲಿ ಮಂಡಳಿಯ (ವಿಶ್ವವಿದ್ಯಾಲಯಗಳ
ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತು ಪಡಿಸಿ, ಇತರ ಎಲ್ಲಾ
ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಉನ್ನತ. ಶಿಕ್ಷಣ, ಹಾಗೂ ವ್ಯಕ್ತಿಪರ. ಕೋರ್ಸ್‌ಗಳ
ವಿಶ್ವವಿದ್ಯಾಲಯಗಳ ಪರಿಕ್ಷೆ ಬರೆಯುವವರು. ಮತ್ತು. ವೈದ್ಯಕೀಯ ಶಿಕ್ಷಣದ ತರಗತಿಗಳನ್ನು
ಹೊರತುಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ, ಆದರೆ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.
ಅಪಾರ್ಟ್‌ಮೆಂಟ್ ಕಂಪ್ಲೇಸ್ಗಳಲ್ಲಿ , ಸಾಮಾನ್ಯವಾಗಿ ನಿವಾಸಿಗಳು/ಜನರು ಸೇರುವ ಸ್ಥಳಗಳಾದ ಜಿಮ್,
ಪಾರ್ಟಿ ಹಾಲ್‌ಗಳು/ಕ್ಲಬ್ ಹೌಸ್‌ಗಳು, ಈಜು ಕೊಳಗಳು, ಇತ್ಯಾದಿಗಳು ಮುಚ್ಚಲ್ಪಟ್ಟಿರುತ್ತವೆ.
ಉಳಿದಂತೆ ಎಲ್ಲಾ ಜಿಮ್‌ಗಳು ಹಾಗೂ ಈಜುಕೊಳಗಳು ಮುಚ್ಚಲ್ಪಟ್ಟಿರುತ್ತವೆ.
ಯಾವುದೇ ತರಹದ ರ್ಯಾಲಿಗಳು, ಮುಷ್ಕರ, ಧರಣಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗಧಿಪಡಿಸಿರುವ ಆಸನದ. ವ್ಯವಸ್ಮೆಯನ್ನು
ಮೀರುವಂತಿಲ್ಲ.
ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ
ನಿರ್ವಹಿಸುವ ಅಭ್ಯಾಸ / ವ್ಯವಸ್ಥೆಯನ್ನು ಪಾಲಿಸುವುದು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಿ.ಬಿ.ಎಂ.ಪಿ ಸೇರಿದಂತೆ, ಮೈಸೂರು, ಕಲಬುರಗಿ, ದಕ್ಷಿಣ
ಕನ್ನಡ ಕನ್ನಡ, ಉಡುಪಿ, ಬೀದರ್ ‘ಮತ್ತು ಧಾರವಾಡ ಜಿಲ್ಲೆಗಳ ಸಿನೆಮಾ ಹಾಲ್ ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ /ಒಂದು ಬಿಟ್ಟೊಂದಾದ ಸೀಟ್‌ಗಳಲ್ಲಿ ಕುಳಿತುಕೊಳ್ಳುವಂತೆ ಗರಿಷ್ಠ 50%
ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸುವುದು.
॥. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಿ.ಬಿ.ಎಂ.ಪಿ ಸೇರಿದಂತೆ, ಮೈಸೂರು, ಕಲಬುರಗಿ, ದಕ್ಷಿಣ
ಕನ್ನಡ ಕನ್ನಡ, ಉಡುಪಿ, ಬೀದರ್ ‘ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪಬ್, ಬಾರ್, ಕ್ಲಬ್, ರೆಸ್ಬೋರಂಟ್ ಗಳಲ್ಲಿ ಗ್ರಾಹಕರ ಸಂಖ್ಯೆಯು ಶೇ ೫೦ ಮೀರುವಂತಿಲ್ಲ.
ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸದರಿ ಪಬ್, ಬಾರ್, ರೆಸ್ಟೋರೆಂಟ್‌ಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೂನೆಗೊಳ್ಳುವವರೆಗೂ ಮುಚ್ಚಲಾಗುವುದು.
ಶಾಪಿಂಗ್ ಮಾಲ್‌ಗಳು, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‌ಗಳು ಹಾಗೂ ಡಿಪಾರ್ಟ್ಮೆಂಟಲ್ ಸ್ಟೋರ್ ಗಳಲ್ಲಿ ಶಿಷ್ಟಾಚಾರ ಅನ್ವಯ ಕೋವಿಡ್ ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ ಕಡ್ಡಾಯವಾಗಿ ಮುಖ ಗವಸು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಝೆರ್, ಹ್ಯಾಂಡ್ ವಾಶ್ ಬಳಕೆ ಜಾರಿಗೊಳಿಸುವುದು.