ಶ್ರೀ ಮಂಗಳಾದೇವಿ ಜಾತ್ರಾ ಮಹೋತ್ಸವ: ದ್ವಿತೀಯ ದಿನ

 ಶ್ರೀ ಮಂಗಳಾದೇವಿ ಜಾತ್ರಾ ಮಹೋತ್ಸವ: ದ್ವಿತೀಯ ದಿನ
Share this post

ವರ್ಷಾವಧಿ ಜಾತ್ರ ಮಹೋತ್ಸವ ದ್ವಿತೀಯ ದಿನ ಸುಸಂದರ್ಭದಂದು ಮೇರು ವೈಭವದ ಅಲಂಕಾರದಲ್ಲಿ ಮೆರೆಯಲ್ಪಡುತ್ತಿರುವ ಶ್ರೀ ಮಂಗಳಾದೇವಿ.

ಭಕ್ತ ಸಂರಕ್ಷಣಾರ್ಥ ಸರ್ವ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ಸಿಂಹಾರೂಢಳಾಗಿ ದರ್ಶನವನ್ನಿತ ಮಹಾದೇವಿ ಮಹಾದಿವ್ಯ ಶೋಭೆಯಿಂದ ಬೆಳಗುತ್ತಾ ಸರ್ವಾಭರಣ ಭೂಷಿತಳಾಗಿ ಕಿತ್ತಳೆ ಕೇಸರಿ ವರ್ಣವುಳ್ಳ ಸೀರೆಯನ್ನು ತೊಟ್ಟು ಚತುರ್ಭಾಹುಗಳಿಂದ ಸುಶೋಭಿತಳಾದ ದೇವಿಯು ಅಭಯ-ವರದ ಹಸ್ತಳಾಗಿ ಪುಷ್ಪ ಹಾರದಿಗಳಿಂದ ಶೋಭಿಸುತ್ತಾ ತನ್ನ ದ್ವಿಬಾಹು’ಗಳಲ್ಲಿ ಚಕ್ರ-ಧನಸ್ಸು-ಬಾಣವನ್ನು ಧರಿಸಿ, ಕಾಲಂದುಗೆಯಲ್ಲಿ ಪರಶುವನ್ನು ಧಾರಣೆಮಾಡಿಕೊಂಡು ಸಿಂಹಾರೂಢಳಾಗಿ ಸಂಪೂರ್ಣ ಗರ್ಭಗೃಹವನ್ನ ವ್ಯಾಪಿಸಿಕೊಂಡು ರಾಜ ಗಾಂಭೀರ್ಯದಿಂದ ಅಲಂಕೃತಳಾಗಿದ್ದಾಳೆ.

ಅಷ್ಟೋತ್ತರ ಶತ ನಾರಿಕೇಳ ಗಣಯಾಗ

ಶ್ರೀ ಮಂಗಳಾದೇವಿ ದೇವಳದಲ್ಲಿ ಜಾತ್ರಾ ಪರ್ವಕಾಲದ ಇಂದಿನ ಬುಧವಾರದ ಸಂಕಷ್ಟ ಹರ ಚತುರ್ಥಿಯಂದು ೧೦೮’ಕಾಯಿ ನಾರಿಕೇಳ ಗಣಯಾಗವು ಶ್ರೀ ಮಹಾಗಣಪತಿ ದೇವರ ಪ್ರೀತ್ಯರ್ಥವಾಗಿ ನೆರವೇರಿತು.

ಜಾತ್ರಾ ಮಹೋತ್ಸವ ಪ್ರಯುಕ್ತ ಏಪ್ರಿಲ್ 2 ರಂದು ದೇವಾಲಯದಲ್ಲಿ ಚಂಡಿಕಾಯಾಗ ನಡೆಯಲಿದೆ.

Subscribe to our newsletter!

Other related posts

error: Content is protected !!