ಕುಟುಂಬ ಗುರುತಿನ ಚೀಟಿ ತಂತ್ರಾಂಶದಲ್ಲಿ ಅಂಗವಿಕಲರ ನೋಂದಣಿಗೆ ಸೂಚನೆ
ಉಡುಪಿ, ಮಾರ್ಚ್ 29, 2021: ಕುಟುಂಬ ಗುರುತಿನ ಚೀಟಿ ತಂತ್ರಾಂಶದಲ್ಲಿ ಅಂಗವಿಕಲರ ನೋಂದಣಿಗೆ ಸೂಸಿಲಾಗಿದೆ.
ಕುಟುಂಬ ಗುರುತಿನ ಸಂಖ್ಯೆ ಯೋಜನೆಗಾಗಿ ವಿಕಲಚೇತನರ ಮಾಹಿತಿಯನ್ನು ಇ-ಆಡಳಿತ ಇಲಾಖೆಯ ಹೊಸದಾದ ತಂತ್ರಾಂಶದಲ್ಲಿ ದತ್ತಾಂಶವನ್ನು ಅಳವಡಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಛೇರಿ ಮತ್ತು ಆಯಾ ತಾಲೂಕು ಮಟ್ಟದಲ್ಲಿ ವಿವಿಧೋದ್ದೇಶ ಪುನವರ್ಸತಿ ಕಾರ್ಯಕರ್ತರು(ಎಮ್.ಆರ್.ಡಬ್ಲ್ಯೂ) ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ (ವಿ.ಆರ್.ಡಬ್ಲ್ಯೂ) ಈಗಾಗಲೇ ಕಾರ್ಯ ಪ್ರಾರಂಭವಾಗಿದ್ದು, ಫಲಾನುಭವಿಗಳು ಅವಶ್ಯಕ ದಾಖಲಾತಿಗಳೊಂದಿಗೆ ಎಮ್.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಡಬ್ಲ್ಯೂ ರವರಿಗೆ ಸರಿಯಾದ ಮಾಹಿತಿ ನೀಡಿ ನಮೂದಿಸಿಕೊಳ್ಳಬೇಕು.
ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಕಲಚೇತನರ ಗುರುತಿನ ಚೀಟಿ (ಹಳೆ ಪುಸ್ತಕದ ಸಂಖ್ಯೆ ಹಾಗೂ ಯುಡಿಐಡಿಗೆ ಸಲ್ಲಿಸಿದ ಅರ್ಜಿ ಸಂಖ್ಯೆ) ಅಥವಾ ಯುಡಿಐಡಿ ಕಾರ್ಡ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಂಖ್ಯೆ, ಇಲಾಖೆ ಹಾಗೂ ಇತರೆ ಇಲಾಖೆಯಿಂದ ಪಡೆದ ಸೌಲಭ್ಯಗಳ ವಿವರಗಳೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ ಮಣಿಪಾಲ ದೂರವಾಣಿ ಸಂಖ್ಯೆ 0820-2574810/811, ವಿವಿಧೋದ್ದೇಶ ಪುನವರ್ಸತಿ ಕಾರ್ಯಕರ್ತರು(ಎಮ್.ಆರ್.ಡಬ್ಲ್ಯೂ) ಉಡುಪಿ ಮೊ: 9449334270, ಕುಂದಾಪುರ ಮೊ: 9901824878, ಕಾರ್ಕಳ ಮೊ: 9481145518 ಹಾಗೂ ಆಯಾ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು (ವಿ.ಆರ್.ಡಬ್ಲ್ಯೂ) ಸಂಪರ್ಕಿಸಬಹುದು.
2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 16,922 ಅಂಗವಿಕಲರು ಇದ್ದು, ಜಿಲ್ಲೆಯಲ್ಲಿ ಇನ್ನೂ ಹಲವರು ಸದರಿ ತಂತ್ರಾಂಶದಲ್ಲಿ ಮಾಹಿತಿಯನ್ನು ಅಳವಡಿಸದೇ ಇರುವ ಹಿನ್ನೆಲೆಯಲ್ಲಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಡಚಣೆ ಉಂಟಾಗಿರುವುದರಿಂದ ಸದರಿ ಯೋಜನೆಯಲ್ಲಿ ವಿಕಲಚೇತನರು ಸರಿಯಾದ ಮಾಹಿತಿ ನೀಡಿ ನಮೂದಿಸಿಕೊಂಡು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.