ಕಾರವಾರ: ಮಾ. 31ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ಮಾ. 31ರಂದು ವಿದ್ಯುತ್ ವ್ಯತ್ಯಯ
Share this post


ಕಾರವಾರ ಮಾ. 29, 2021: ಕಾರವಾರ ತಾಲೂಕಿನ 33ಕೆವಿ ಶೇಜವಾಡ-ಕೋಣೆ ಮಾರ್ಗದಲ್ಲಿ ಗೋಪುರ ನಿರ್ಮಿಸುವ ಕಾಮಗಾರಿಯನ್ನು ಹಮ್ಮಿ ಕೊಂಡಿರುವದರಿಂದ ಮಾ. 31ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ,

ಎನ್ ಎಚ್-17, ಬೈತೋಕಲ್, ಬಿಣಗಾ, ತೋಡುರ ಮತ್ತು ಅಮದಳ್ಳಿಗ್ರಾಮ ಪಂಚಾಯತ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!