ಸಂದರ್ಶಕ ವೈದ್ಯ ಹುದ್ದೆಗೆ ಅರ್ಜಿ ಆಹ್ವಾನ

 ಸಂದರ್ಶಕ ವೈದ್ಯ ಹುದ್ದೆಗೆ ಅರ್ಜಿ ಆಹ್ವಾನ
Share this post

ಕಾರವಾರ ಮಾ. 20, 2021: ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ “ಸಂದರ್ಶಕ ವೈದ್ಯ” ಹುದ್ದೆಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು 179 ದಿನಗಳ ಅವಧಿಯ ತಾತ್ಕಾಲಿಕ ನೇಮಕಾತಿಯಾಗಿದ್ದು, ತಿಂಗಳಿಗೆ 20 ಸಾವಿರ ವೇತನ ನೀಡಲಾಗುವುದು.

ಎಂಬಿಬಿಎಸ್\ಬಿ.ಎ ಎಮ್‍ಎಸ್\ಬಿಹೆಚ್‍ಎಮ್‍ಎಸ್ ಉತ್ತೀರ್ಣರಾದವರು ಹಾಗೂ ಕೆಎಂಸಿಯ ನೊಂದಣಿಯನ್ನು ಹೊಂದಿರವರು ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 1, ಬೆಳಗ್ಗೆ 10 ಕ್ಕೆ ಶಿರಸಿ ಅರಣ್ಯ ಮಹಾವಿದ್ಯಾಲಯದ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.

ಸಂದರ್ಶನಕ್ಕೆ ಬರುವಾಗ ತಮ್ಮ ಎಲ್ಲ ಮೂಲ ದಾಖಲಾತಿಗಳ ಜೊತೆಗೆ ಎರಡು ಧೃಢಿಕೃತ ಪತ್ರಗಳೊಂದಿಗೆ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ತೆಗೆದುಕೊಂಡು ಬರಬೇಕೆಂದು ಅವರು ಹೇಳಿದ್ದಾರೆ.

Subscribe to our newsletter!

Other related posts

error: Content is protected !!