ರೈಲ್ವೆಗೆ ಸಿಲುಕಿ ಚಿರತೆ ಸಾವು
ಕಾರವಾರ, ಮಾರ್ಚ್ 21, 2021: ತಾಲೂಕಿನ ಚೆಂಡಿಯಾ ಗ್ರಾಮದ ಭಜನಕೇರಿಯಲ್ಲಿ ಮಾರ್ಚ 20 ಶನಿವಾರ ದಂದು ಮಧ್ಯಾಹ್ನ ವೇಳೆಗೆ ಕೊಂಕಣ ರೈಲ್ವೆ ಮಾರ್ಗದ ರೈಲ್ವೆ ಗೆ ಸಿಲುಕಿದ 3 ವರ್ಷದ ಒಂದು ಗಂಡು ಚಿರತೆ ಸಾವಿಗಿಡಾಗಿದೆ ಎಂದು ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ ಕುಮಾರ, ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ್, ಪಶು ವೈಧ್ಯಾಧಿಕಾರಿ, ಕೊಂಕಣ ರೈಲ್ವೆ ಸೆಕ್ಷನ್ ಇಂಜಿನೀಯರ ಒಳಗೊಂಡಂತೆ ಪಂಚರ ಸಮ್ಮುಖದಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಯಿತೆಂದು ಮಾಹಿತಿ ನಿಡಿದ್ದಾರೆ.
ಕಾರವಾರ ಉಪ ಸಂರಕ್ಷಣಾಧಿಕಾರಿಯವರ ಆದೇಶದಂತೆ ಚಿರತೆಯ ಕಳೇಬರವನ್ನು ದಹಿಸಲು ಸೂಕ್ತ ಕ್ರಮ ಜರುಗಿಸಲಾಯಿತು.
ನಂತರ ಕೊಂಕಣ ರೈಲ್ವೆ ಹಳಿಗಳ ಮೇಲೆ ವನ್ಯಪ್ರಾಣಿಗಳಾದ ಚಿರತೆ, ಕಡವೆ, ಕಾಡು ಹಂದಿಗಳು ಸಾವನ್ನಪ್ಪುತ್ತಿರುದು ಕಂಡು ಬಂದಿದ್ದು, ಅರಣ್ಯ ಇಲಾಖೆಯಿಂದ ಅವಗಡಗಳನ್ನು ತಡೆಗಟ್ಟಲು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾವನೆಯನ್ನು ತಯಾರಿಸಿ ಕೆ.ಆರ್.ಸಿ.ಎಲ್ ರವರಿಗೆ ಕಳುಹಿಸುವ ಕುರಿತಂತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು ಎಂದು ಅವರು ಹೆಳಿದ್ದಾರೆ.