ಮಂಗಳೂರು-ಕಾರವಾರ ವೋಲ್ವೋ ಬಸ್ ಪ್ರಾರಂಭ

 ಮಂಗಳೂರು-ಕಾರವಾರ ವೋಲ್ವೋ ಬಸ್ ಪ್ರಾರಂಭ
Share this post

ಕಾರವಾರ ಮಾ. 19, 2021: ಮಂಗಳೂರು ನಿಂದ ಕಾರವಾರಕ್ಕೆ ವೋಲ್ವೋ ಸಾರಿಗೆ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ಕೆ ಎಸ್ ಆರ್ ಟಿ ಸಿ ಮಂಗಳೂರು. ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಮಂಗಳೂರು-ಕಾರವಾರ ಮಾರ್ಗದಲ್ಲಿ ವೋಲ್ವೋ ಬಸ್ ಕಾರ್ಯಾಚರಣೆಯ ಪ್ರಾರಂಭಿಸಲಾಗಿರುತ್ತದೆ. ವೋಲ್ವೋ ಸಾರಿಗೆಯು ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ ಮಾರ್ಗವಾಗಿ ಕಾರವಾರಕ್ಕೆ ಬರಲಿದೆ.

ಬಸ್ ಮಧ್ಯಾಹ್ನ 4:15 ಮಂಗಳೂರಿನಿಂದ ಹೊರಟು ರಾತ್ರಿ 9:15 ಕಾರವಾರ ತಲುಪುವುದು. ಹಾಗೂ ಬೆಳಗ್ಗೆ 6:45 ಕಾರವಾರ ಹೊರಟ ಬಸ್ 11:45 ಮಂಗಳೂರು ತಲುಪುವುದು ಎಂದು ಅವರು ಹೇಳಿದ್ದಾರೆ.

Subscribe to our newsletter!

Other related posts

error: Content is protected !!