ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಾಲೂಕು ಭೇಟಿ, ದೂರು ಸ್ವೀಕಾರ

 ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಾಲೂಕು ಭೇಟಿ, ದೂರು ಸ್ವೀಕಾರ
Share this post

ಮಂಗಳೂರು, ಮಾರ್ಚ್ 17, 2021: ದ.ಕ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾರ್ಚ್ 19, 25 ಮತ್ತು 26 ರಂದು ಜಿಲ್ಲೆಯಲ್ಲಿ  ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿರುವರು.

  • ಮಾರ್ಚ್ 19 ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಸರ್ಕಾರಿ ಪ್ರವಾಸಿ ಮಂದಿರ,
  • ಮದ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಬಂಟ್ವಾಳ ತಾಲೂಕು ಸರ್ಕಾರಿ ಪ್ರವಾಸಿ ಮಂದಿರ,  
  • ಮಾರ್ಚ್ 25 ರಂದು ಬೆಳಿಗ್ಗೆ 11  ರಿಂದ ಮದ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಸರ್ಕಾರಿ ಪ್ರವಾಸಿ ಮಂದಿರ,
  • ಮದ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಪುತ್ತೂರು ತಾಲೂಕು ಸರ್ಕಾರಿ ಪ್ರವಾಸಿ ಮಂದಿರ,
  • ಮಾರ್ಚ್  26 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಮೂಡಬಿದ್ರೆ ತಾಲೂಕು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ.

ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2483000 ಸಂಪರ್ಕಿಸುವಂತೆ ಮಂಗಳೂರು ಪೊಲೀಸ್ ನಿರೀಕ್ಷಕರು, ಎಸಿಬಿ, ಶ್ಯಾಮ್ ಸುಂದರ್ ಹೆಚ್.ಎಂ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!