ಕಾರವಾರ: ವಿದ್ಯುತ್ ಗ್ರಾಹಕರ ಸಂವಾದ ಸಭೆ
ಕಾರವಾರ, ಮಾರ್ಚ್ 16, 2021: ನಗರದ ಹೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಯಲ್ಲಿ ಮಾರ್ಚ್ 20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ಅದಾಲತ್ ಹಾಗೂ ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ.
ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಗಳೇನಾದರೂ ಇದ್ದಲ್ಲಿ ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ನೀಡಬಹುದು ಎಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.