ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಲಸಿಕೆ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಮಾರ್ಚ್ 08, 2021: ಜಿಲ್ಲೆಯಲ್ಲಿ ಇಂದಿನಿಂದ ಎಲ್ಲಾ ಸರಕಾರಿ ಆಸ್ಪತ್ರ‍್ರೆಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ABARK ನೊಂದಾಯಿತ 14 ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ಪಾವತಿಸಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವಯಸ್ಸಿನವರಲ್ಲಿ Comorbid Condtion ಇರುವವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 250 ರೂ ಪ್ರತೀ ಡೋಸ್ ಗೆ ನೀಡಿ ಪಡೆಯಬಹುದಾಗಿದೆ, ಫಲಾನುಭವಿಗಳು ಲಸಿಕೆ ಪಡೆಯಲು ಯಾವುದೇ ಆಸ್ಪತ್ರೆಗಳಲ್ಲಿ ಆನ್ ಲೈನ್ ಮೂಲಕ ಯಾವುದೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದು.
ಲಸಿಕೆ ಪಡೆಯಲು ವೆಬ್ ಸೈಟ್ ವಿಳಾಸ: https://selfregistration.cowin.gov.in ನಲ್ಲಿ
ನೊಂದಾಯಿಸಿಕೊಳ್ಳಬಹುದು.
ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಕವರೇಜ್ ಮತ್ತು ತಿಳುವಳಿಕೆ ಇಲ್ಲದವರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ನೇರವಾಗಿ ಲಸಿಕಾ ಕೆಂದ್ರಕ್ಕೆ ಬಂದು ಸ್ಪಾಟ್ ರಿಜಿಸ್ಟ್ರೇಷನ್ ಮಾಡಿ, ಅದೇ ದಿನ ಲಸಿಕೆ ಪಡೆಯಬಹುದು, ಜಿಲ್ಲೆಯಲ್ಲಿ 60 ವರ್ಷ 60 ವರ್ಷ ಮೇಲ್ಪಟ್ಟ ಮತ್ತು 45 ರಿಂದ 59 ವಯಸ್ಸಿನ Comorbid Condtion ಇರುವ 151557 ಮಂದಿಗೆ ಗುರಿ ನಿಗದಿಪಡಿಸಿದ್ದು, ಜಿಲ್ಲೆಗೆ 82100 ಡೋಸ್ ಕೋವಿಶೀಲ್ಡ್ ಲಸಿಕೆ ಸರಬರಾಜು ಆಗಿದ್ದು, ಇದರಲ್ಲಿ 49200 ಹಿರಿಯ ನಾಗರೀಕರಿಗೆ
ಮೀಸಲಾಗಿದೆ ಎಂದು ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ರಜಾದಿನ ಹೊರತುಪಡಿಸಿ ಎಲ್ಲಾ ದಿನ ಲಸಿಕೆ ಪಡೆಯಬಹುದು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೆಂದ್ರಗಳಲ್ಲಿ ಮಂಗಳವಾರ ಮತ್ತು ಗುರುವಾರ ಹೊರತುಪಡಿಸಿ ಎಲ್ಲಾ ಕೆಲಸದ ದಿನಗಳಂದು ಲಸಿಕೆ ಪಡೆಯಬಹುದು.
ಹಿರಿಯ ನಾಗರೀಕರು ಮತ್ತು ಇತರೇ ಕಾಯಿಲೆಗಳಿಂದ ಬಳಲುತ್ತಿರುವವರು ಕೋವಿಡ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗುತ್ತಿದ್ದು, ಇವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತೆ ಹೇಳಿದರು.
ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದ ನಂತರ 3 ಮಂದಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಅದು ಕೂಡ ಲಸಿಕೆಯಿಂದ ಅಲ್ಲ ಎಂದು ದೃಡಪಟ್ಟಿದೆ, ಆ ಮೂರು ಜನ ಸಹ ಸುರಕ್ಷಿತವಾಗಿದ್ದು, ಸಾರ್ವಜನಿಕರು ಲಸಿಕೆ ಕುರಿತಂತೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಲಸಿಕೆ ಪಡೆಯುಬೇಕು.
ಜಿಲ್ಲೆಗೆ ನೆರೆಯ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ 72 ಗಂಟೆಗಳ ಅವಧಿಯ ಕೋವಿಡ್ ನೆಗೆಟಿವ್ ವರದಿ ಹೊಂದಿಬೇಕು. ವ್ಯವಹಾರಿಕ ಉದ್ದೇಶಗಳಿಗಾಗಿ ಎರಡೂ ರಾಜ್ಯಗಳಿಗೆ ನಿರಂತರವಾಗಿ ಓಡಾಡುವವರು 15 ದಿನಗಳಿಗೊಮ್ಮ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು,
ನೆಗೆಟಿವ್ ವರದಿ ಇಲ್ಲದೇ ಜಿಲ್ಲೆಗೆ ಆಗಮಿಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಸಾರ್ವಜನಿಕರು ತಮ್ಮ ಮನೆಯ ಸಮೀಪ ನೆಗೆಟಿವ್ ವರದಿ ಇಲ್ಲದೇ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ತಿಳಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಉಪಸ್ಥಿತರಿದ್ದರು.