ಇ-ಎಪಿಕ್ ಮೂಲಕ ಚುನಾವಣಾ ಗುರುತಿನ ಚೀಟಿ ಲಭ್ಯ
ಕಾರವಾರ, ಮಾರ್ಚ್ 05, 2021: ಚುನಾವಣಾ ಆಯೋಗವು ರೂಪಿಸಿರುವ ಇ-ಎಪಿಕ್ ಎಂಬ ಕಾರ್ಯಕ್ರಮದ ಮೂಲಕ ಮತದಾರರು ತಮ್ಮ ಗುರುತಿನ ಚೀಟಿಯನ್ನು ತಾವೇ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ಕಾರವಾರ ತಹಶೀಲ್ದಾರ್ ಆರ್.ವಿ. ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ 2021 ಅವಧಿಯಲ್ಲಿ ದಾಖಲಾದ ಮತ್ತು ನಮೂನೆ 6ರಲ್ಲಿ ಮೊಬೈಲ್ ಸಂಖ್ಯೆಯನ್ನು ನೀಡಿರುವ ಆಯ್ದ ಮತದಾರರಿಗೆ ಓಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ತಮ್ಮಇ-ಎಪಿಕ್ ಡೌನ್ ಲೋಡ್ ಮಾಡುವ ಕಾರ್ಯಕ್ರಮದಡಿ ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಮತದಾರರು ಆನ್ಲೈನ್ ಮೂಲಕ ಅತೀ ಸುಭವಾಗಿ ತಮ್ಮ ಚುನಾವಣಾ ಗುರುತಿನ ಚೀಟಿಯನ್ನುತಾವೇ https://www.nvsp.in ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರ ಪ್ರತಿಯನ್ನು ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.