ವ್ಯವಸ್ಥಾಪನಾ ಸಮಿತಿ ರಚನೆ: ಭಕ್ತಾಧಿಗಳಿಂದ ಅರ್ಜಿ ಆಹ್ವಾನ

 ವ್ಯವಸ್ಥಾಪನಾ ಸಮಿತಿ ರಚನೆ: ಭಕ್ತಾಧಿಗಳಿಂದ ಅರ್ಜಿ ಆಹ್ವಾನ
Share this post

ಮಂಗಳೂರು, ಮಾರ್ಚ್ 03, 2021: ದ.ಕ. ಜಿಲ್ಲೆಯ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಕಲಂ(25) ರನ್ವಯ ಜಿಲ್ಲೆಯ “ಸಿ” ಪ್ರವರ್ಗದ ಪ್ರಕಟಣೆ ಹೊರಡಿಸದೆ ಇರುವ ಹಾಗೂ ಕಳೆದ ಸಾಲಿನ ನವೆಂಬರ್ ತಿಂಗಳಲ್ಲಿ ಅವಧಿ ಮುಗಿದಿರುವ ಈ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮಂಗಳೂರು ತಾಲೂಕಿನ ಪ್ರವರ್ಗ ‘ಸಿ’ ಗೆ ಸೇರಿದ ಒಟ್ಟು 3 ದೇವಸ್ಥಾನಗಳ ವಿವರ:  

  1. ಕೆಂಜಾರು ಗ್ರಾಮದ ಶ್ರೀ ಮೊಗರಂದಾಯ ಮಹಾದೇವ ದೇವಸ್ಥಾನ,
  2. ಸುರತ್ಕಲ್‍ನ ಶ್ರೀ ಮೂರ್ನಾಡುಮಾಗಣೆ ಮಹಮ್ಮಾಯಿ ದೇವಸ್ಥಾನ, ಗುರುಪುರ,
  3. ಮೂಳೂರಿನ ಶ್ರೀ ಸೋಮನಾಥ ದೇವಸ್ಥಾನ.

ಬಂಟ್ವಾಳ ತಾಲೂಕಿನ ಪ್ರವರ್ಗ ‘ಸಿ’ ಗೆ ಸೇರಿದ ಒಟ್ಟು 3 ದೇವಸ್ಥಾನಗಳ ವಿವರ:

  1. ಯೆರುಂಬು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನ,
  2. ಮಾಣಿಲ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ,
  3. ಪೆರುವಾಯಿ ಗ್ರಾಮದ ಶ್ರೀ ಪಂಜುರ್ಲಿ ದೈವಸ್ಥಾನ.

ಪುತ್ತೂರು ತಾಲೂಕು ಪ್ರವರ್ಗ ‘ಸಿ’ ಗೆ ಸೇರಿದ 1 ದೇವಸ್ಥಾನ:

  1. ಬಡಗನೂರು ಪಡುಮಲೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನ.    

ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಧಾರ್ಮಿಕ ಪರಿಷತ್, ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಮಂಗಳೂರು ಕಚೇರಿಯ ದೂ. ಸಂಖ್ಯೆ: 0824-2220576 ಹಾಗೂ [email protected] ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಧಾರ್ಮಿಕ ಪರಿಷತ್‍ನ ಪದನಿಮಿತ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!