ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಕಾರ್ಯಕ್ರಮ: ಎರಡು ದಿನಗಳ ಶಿಬಿರ
ಮಂಗಳೂರು, ಮಾರ್ಚ್ 04, 2021: ಚುನಾವಣಾ ಆಯೋಗವು ಜನವರಿ 25 ರಿಂದ ಹೊಸದಾಗಿ ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್(ಇ-ಎಪಿಕ್) ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2021ರಲ್ಲಿ ಯುನೀಕ್ ಮೊಬೈಲ್ ನಂಬರ್ ನೀಡಿ ನೋಂದಣಿಯಾಗಿರುವ ಮತದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಅವರ ಛಾಯಾಚಿತ್ರವಿರುವ ಮತದಾರರ ಗುರುತಿನ ಚೀಟಿ(ಇ-ಎಪಿಕ್) ಅನ್ನು http://voterportal.cci.gov.in , http://nvsp.in ಮೂಲಕ ಡೌನ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಯಲ್ಲಿ ಮಾರ್ಚ್ 6 ಹಾಗೂ 7 ರಂದು ಎರಡು ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರರ ಕಚೇರಿಯ ಚುನಾವಣಾ ಶಾಖೆ ಅಥವಾ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ (ಬಿಎಲ್ಒ) ಗ್ರಾಮ ಕರಣಿಕರು ಅಥವಾ ದೂರವಾಣಿ ಸಂಖ್ಯೆ:0824-2220592 ನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.