ಶ್ರೀಮದ್ಭಗವದ್ಗೀತಾ ಪುಸ್ತಕ ವಿತರಣೆ


ಮಂಗಳೂರು, ಮಾರ್ಚ್ 03, 2021: ಮಂಗಳೂರಿನ ಶ್ರೀ ರಾಮಕೃಷ್ಣ ಮಠದಿಂದ ಕೊಡಮಾಡಿದ ಶ್ರೀಮದ್ಭಗವದ್ಗೀತಾ ಪುಸ್ತಕವನ್ನು ಮಣಿ ಕೃಷ್ಣಸ್ವಾಮಿ ಅಕಾಡಮಿಯು ಪ್ರತಿ ಮಂಗಳವಾರ ಸುರತ್ಕಲ್ನ ಅನುಪಲ್ಲವಿಯಲ್ಲಿ ನಡೆಸುವ ‘ನಾಮ ಸಂಕೀರ್ತನಾ’ ಸಂದರ್ಭ ಪರಿಸರದ ವಿದ್ಯಾರ್ಥಿಗಳಿಗೆ ಹಂಚಲಾಯ್ತು.
ಸುರತ್ಕಲ್ನ ನಾಗರಿಕಾ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ ರಾಜಮೋಹನ್ ರಾವ್ ಈ ಪುಸ್ತಕ ವಿತರಣೆಯನ್ನು ನೆರವೇರಿಸಿದರು.
ಒಟ್ಟು 300 ಪುಸ್ತಕವನ್ನು ಶ್ರೀ ರಾಮಕೃಷ್ಣ ಮಠ ನೀಡಲಿದ್ದು ಇದನ್ನು ಸುರತ್ಕಲ್ ಪರಿಸರದಲ್ಲಿ ನಾಮ ಸಂಕೀರ್ತನಾ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಹಂಚಲಾಗುವುದೆಂದು ಅಕಾಡಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್ ತಿಳಿಸಿದರು.
ನಿವೃತ್ತ ಉಪನ್ಯಾಸಕ ಬಿ ಗಣಪತಿ ಭಟ್, ಕೃಷ್ಣಕುಮಾರಿ ಉಪಸ್ಥತರಿದ್ದರು