ತೆಂಗಿನಕಾಯಿ ಫಸ ಲು ಬಹಿರಂಗ ಹರಾಜು
ಮಂಗಳೂರು, ಫೆಬ್ರವರಿ 25, 2021: ಪ್ರಸ್ತುತ ಸಾಲಿನಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೃಷಿ ತರಬೇತಿ ಕೇಂದ್ರ, ಬೀಜೋತ್ಪಾದನಾ ಕೇಂದ್ರದ ತೆಂಗಿನ ತೋಟದಲ್ಲಿ 2020ನೇ ಎಪ್ರಿಲ್ 1 ರಿಂದ 2021ನೇ ಮಾರ್ಚ್ 31 ರ ಅವಧಿಯಲ್ಲಿ ಬೆಳೆಯಲಾದ ತೆಂಗಿನಕಾಯಿ ಫಸಲನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ ಕಛೇರಿಯಲ್ಲಿ ಫೆಬ್ರವರಿ 26 ರಂದು ಬೆಳಿಗ್ಗೆ 11 ಗಂಟೆಗೆ ಹರಾಜು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.
ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಕೃಷಿ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ, ದ.ಕ. ಜಿಲ್ಲೆ, ದೂರವಾಣಿ ಸಂಖ್ಯೆ: 08256-234057, ಮೊಬೈಲ್ ಸಂಖ್ಯೆ: 8277931067 ಹಾಗೂ [email protected] ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.