ಮೆಟ್ರೀಕ್ ನಂತರದ ವಿದ್ಯಾರ್ಥಿ ವೇತನಕ್ಕ್ಕೆಅರ್ಜಿ ಆಹ್ವಾನ
ಕಾರವಾರ, ಫೆಬ್ರವರಿ 18, 2021: ಮೆಟ್ರಿಕ್ ನಂತರದ 2021-21 ನೇ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ ನವೀನ ಮತ್ತು ನವೀಕರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕಆದಾಯ 2.50 ಲಕ್ಷ ಮೀರಿರಬಾರದು, ಕಡ್ಡಾಯವಾಗಿ ತಮ್ಮ ಖಾತೆಗೆ ಆಧಾರ್ಜೋಡಣೆ ಮಾಡಿದ್ದು, ಅರ್ಜಿಯನ್ನು ವಿದ್ಯಾರ್ಥಿ ವೇತನ ಪೋರ್ಟಲ್ www.sw.kar.nic.in ವೆಬ್ಸೈಟ್ನಲ್ಲಿಅರ್ಜಿ ಸಲ್ಲಿಸಿ ,ಅರ್ಜಿಯೊದಿಂಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಶುಲ್ಕ ರಸೀದಿ, ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ಮೂಲ ದಾಖಲೆಗಳೊಂದಿಗೆ ಮಾರ್ಚ 15 ರೊಳಗಾಗಿ ಸಹಾಯಕ ನಿರ್ದೇಶಕರು (ಗ್ರೇಡ್-2). ಸಮಾಜಕಲ್ಯಾಣ ಇಲಾಖೆ ಕಾರವಾರ ಕಚೇರಿಗೆ ಸಲ್ಲಿಸಲುಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ:08382-226095 ಸಂಪರ್ಕಿಸಬಹುದಾಗಿದೆ.