ಹಿರಿಯ ನಾಗರಿಕರಿಗೆ ಶೇ.25% ರಷ್ಟು ಪ್ರಯಾಣ ದರದಲ್ಲಿ ರಿಯಾಯಿತಿ

 ಹಿರಿಯ ನಾಗರಿಕರಿಗೆ ಶೇ.25% ರಷ್ಟು ಪ್ರಯಾಣ ದರದಲ್ಲಿ ರಿಯಾಯಿತಿ
Share this post

ಮಂಗಳೂರು, ಫೆಬ್ರವರಿ 10, 2021: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಸಂಚರಿಸುವ ರಾಜ್ಯದ ಹಿರಿಯ ನಾಗರಿಕರಿಗೆ ನೀಡುತ್ತಿರುವ ಶೇ.25% ರಷ್ಟು ಪ್ರಯಾಣ ದರ ರಿಯಾಯಿತಿಯನ್ನು ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ  ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.

ಆದರೆ ಪ್ರಯಾಣ ದರದ ರಿಯಾಯಿತಿ ಸೌಲಭ್ಯವನ್ನು 2020ನೇ ಸಾಲಿನ ಡಿಸೆಂಬರ್ 10 ರಿಂದ ಮುಂದುವರೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್, ದೂ.ಸಂಖ್ಯೆ: 0824-2458173 ನ್ನು ಸಂಪರ್ಕಿಸಬಹುದು ಎಂದು ಜಿಲ್ಲೆಯ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!