ವಿವಿಧ ಘಟಕಗಳ ಅನುಷ್ಠಾನಕ್ಕೆ ಪ್ರಸ್ತಾವನೆ ಆಹ್ವಾನ

 ವಿವಿಧ ಘಟಕಗಳ ಅನುಷ್ಠಾನಕ್ಕೆ ಪ್ರಸ್ತಾವನೆ ಆಹ್ವಾನ
Share this post

ಮಂಗಳೂರು, ಜನವರಿ 09, 2021: ಕರ್ನಾಟಕ ಯೋಜನಾ ಮಂಡಳಿಯು ಕೋವಿಡ್-19 ಹರಡುವಿಕೆಯಿಂದ ಅರ್ಥ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಬೀರಿರುವುದನ್ನು ಸರಿಪಡಿಸಲು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹಾಗೂ ವಿವಿಧ ಘಟಕಗಳನ್ನು ಸ್ಥಾಪಿಸಲು ಆಸಕ್ತ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸೂಕ್ತ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯ ಉದ್ಯಮಗಳ ಮುಖಾಂತರ ರೈತರಿಗೆ ತರಬೇತಿ ನೀಡುವುದು ಹಾಗೂ ಅವರನ್ನು ಕೃಷಿ ಉದ್ಯಮಶೀಲರಾಗಿ ಗುರುತಿಸುವುದು, ಆತ್ಮ ನಿರ್ಭರ್ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದು, ಆಹಾರ ಸಂಸ್ಕರಣೆ ಯೋಜನೆಗಳ ಪ್ರಸ್ತಾವಣೆ ಸಲ್ಲಿಸುವುದು, ತ್ಯಾಜ್ಯ ಮರುಬಳಕೆ ಮಾಡುವುದು, ಕೌಶಲ್ಯಾಭಿವೃದ್ಧಿ ಇಲಾಖೆಯಸಹಕಾರದೊಂದಿಗೆ ತರಬೇತಿಗಳನ್ನು ಆಯೋಜಿಸುವುದು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಹೊಸ ತಂತ್ರಜ್ಞಾನದಲ್ಲಿ ಆಹಾರ ಸಂಸ್ಕರಣೆಗಳು, ಎಂಎಸ್‍ಎಂಇ, ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ರಚಿಸಲು ಪಿಪಿಪಿ ಮಾದರಿಯಲ್ಲಿ ಪ್ರಸ್ತಾವಣೆಯನ್ನು ತಯಾರಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಲಾಲ್‍ಬಾಗ್, ಮಂಗಳೂರು, ದೂ.ಸಂಖ್ಯೆ : 0824-2457389 ನ್ನು ಸಂಪರ್ಕಿಸಬಹುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!