ವಿದ್ಯಾರ್ಥಿಗಳು ಪರಿಪೂರ್ಣ ಮನಸ್ಸಿನಿಂದ ಸಮಾಜ ಸೇವೆ ಮಾಡಬೇಕು: ರೆ.ಫಾ ಬೇಸಿಲ್ ವಾಸ್
ಮಡಂತ್ಯಾರ್ ಫೆ 08, 2021: ವಿದ್ಯಾರ್ಥಿಗಳು ಪರಿಪೂರ್ಣ ಮನಸಿನೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನೀಡಬೇಕು ಎಂದು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ. ಫಾ. ಬೇಸಿಲ್ ವಾಸ್ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಜೋಸೆಫ್ ಎನ್. ಎಮ್ ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳದೆ ಸಮಾಜದ ಹಿತಕ್ಕಾಗಿ ದುಡಿಯಬೇಕು ಎಂದು ಹೇಳಿದರು.
ಎನ್ ಎಸ್ ಎಸ್ ಯೋಜನಾದಿಕಾರಿಗಳಾದ ಪ್ರೊ ಜನಾರ್ಧನ್ ನಾಯರ್ ,ರಾಬಿನ್ ಜೋಸೆಫ್ ಸೆರಾ,ಘಟಕದ ನಾಯಕ ಹಾಗೂ ನಾಯಕರಾದ ಶರತ್, ಮನೀಶ್,ಸಚಿನ್, ಕಿರಣ್, ಕ್ಲೇರಿನ್, ವರ್ಷ, ದಿಶಾ, ದೀಕ್ಷಾ, ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಯೋಜನಾಧಿಕಾರಿ ರಾಬಿನ್ ಜೋಸೆಫ್ ಸೆರಾ ಸ್ವಾಗತಿಸಿದರು. ನಾಯಕ ಶರತ್ ವಂದಿಸಿದರು. ಚೈತ್ರಾ ಹಾಗೂ ಸ್ಟೆಫಿ ಕಾರ್ಯಕ್ರಮ ನಿರೂಪಿಸಿದರು.
ವರದಿ
ಶ್ರೇಯಸ್ ಅಂತರ
ಫೈನಲ್ ಎಂ ಕಾಮ್
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು