ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಸಾಮಾಜಿಕ ಅಭಿವೃದ್ದಿ ಅನುಷ್ಠಾನದಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರದ ಬಗ್ಗೆ ವೆಬಿನಾರ್

 ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಸಾಮಾಜಿಕ ಅಭಿವೃದ್ದಿ ಅನುಷ್ಠಾನದಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರದ ಬಗ್ಗೆ ವೆಬಿನಾರ್
Share this post
Madanthyar College

ಮಡಂತ್ಯಾರು ಜನವರಿ 25, 2021: ಸಾಂಸ್ಥಿಕ ಸಾಮಾಜಿಕ ಅಭಿವೃದ್ಧಿ ಅನುಷ್ಠಾನದಲ್ಲಿ ಸರ್ಕಾರೇತರ ಸಂಸ್ಥೆಗಳ ಕಾರ್ಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ಪಿಜಿ ವಾಣಿಜ್ಯ ವಿಭಾಗ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶವು ಜನವರಿ 22, 2021 ರಂದು ಆಯೋಜಿಸಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀನಿವಾಸ್ ಕಾಲೇಜಿನ ಸ್ಟೀವನ್ ಡಿಸೋಜ ಆಧುನಿಕ ಸಮಾಜದಲ್ಲಿ ಸರ್ಕಾರೇತರ ಸಂಸ್ಥೆಗಳ ಚಟುವಟಿಕೆಗಳು, ಯೋಜನೆಗಳು, ಕಾರ್ಯಕ್ರಮಗಳು ಮತ್ತು ವೇಳಾಪಟ್ಟಿಗಳು, ಹಾಗೂ ಆ ಸಂಸ್ಥೆಗಳ ಸಮಿತಿಗಳು ಇತ್ಯಾದಿಗಳನ್ನು ವಿವರಿಸಿದರು.

ಸಮಾಜದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಈ ಸರ್ಕಾರೇತರ ಸಂಸ್ಥೆಗಳು ಹೇಗೆ ಕಾರ್ಯ ನೀರ್ವಹಿಸುತ್ತದೆ ಎಂದು ಹೇಳಿದರು. ಶಿಕ್ಷಣದ ಉತ್ತೇಜನ, ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡುವುದು, ಕೊಳೆಗೇರಿಗಳ ಅಭಿವೃದ್ಧಿ ಇತ್ಯಾದಿ ರೂಪದಲ್ಲಿ ಸಿಎಸ್‌ಆರ್ ನ ಕಾರ್ಯಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Madanthyar College

ಅಧ್ಯಕ್ಷತೆ ವಹಿಸಿದ್ದ ಪಿಜಿ ವಾಣಿಜ್ಯ ವಿಭಾಗದ ಸಂಯೋಜಕರಾದ ಪಾವನ ರೈ ಸಿ ಎಸ್ ಆರ್ ಬಗ್ಗೆ ಜಾಗೃತರಾಗಿರುವುದು ಪ್ರತಿಯೊಬ್ಬ ವ್ಯಕ್ತಿಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಯುವಕರು ಉತ್ತಮವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸಲ್ಪಡುತ್ತಾರೆ ಎಂದು ಹೇಳಿದರು.

ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿನಿ ಎಂ.ಅನುಶ್ರೀ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು ಮತ್ತು ಸಭೆಯನ್ನು ಸ್ವಾಗತಿಸಿದರು, ಕು ದೀಪ್ತಿ ಧನ್ಯವಾದಗಳನ್ನು ಸಮರ್ಪಿಸಿದರು ಮತ್ತು ಎಂ.ಎಸ್.ವೈಶಾಲಿ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ:
ಶ್ರೇಯಸ್ ಅಂತರ
ಫೈನಲ್ ಎಂ ಕಾಮ್
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು

Subscribe to our newsletter!

Other related posts

error: Content is protected !!