ಉಡುಪಿ ಶ್ರೀ ಕೃಷ್ಣ ಮಠದಲ್ಲಿ “ಪರ್ಯಾಯ ಪಂಚಶತಮಾನೋತ್ಸವ” ಸಮಾರೋಪ
ಉಡುಪಿ, ಜನವರಿ 23, 2021: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ “ಪರ್ಯಾಯಪಂಚಶತಮಾನೋತ್ಸವ”ದ ಸಮಾರೋಪ ಸಮಾರಂಭ ಇಂದು ನಡೆಯಿತು.
ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾದ್ಯಾಯ ಮತ್ತು ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ತಮಿಳುನಾಡಿನ ಬಿ.ಜೆ.ಪಿ. ಉಪಾಧ್ಯಕ್ಷರಾದ ಅಣ್ಣಾಮಲೈ ಅವರು ವೀಡಿಯೋ ಸಂದೇಶ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ದಿ.ಕೆ.ಕೆ.ಪೈ ಸ್ಮರಣಾರ್ಥ ಅವರ ಮೊಮ್ಮಗ ಅಶ್ವಿನ್, ದಿ.ವಿಜಯನಾಥ ಶೆಣೈ ಸ್ಮರಣಾರ್ಥ ಅವರ ಪುತ್ರಿ ಅನುರೂಪಾ ಶೆಣೈ ,ದಿ.ದೇವರಾಜ ಸ್ಮರಣಾರ್ಥ ಅವರ ಪುತ್ರ ರಾಜೇಶ್ ರಾವ್, ದಿ.ಟಿ.ವಿ.ರಾವ್ ಸ್ಮರಣಾರ್ಥ ಅವರ ಪುತ್ರ ಡಾ.ಶ್ರೀನಿವಾಸ ರಾವ್, ಮೂಡಬಿದ್ರೆಯ ದಿ.ಅಮರನಾಥ ಶೆಟ್ಟಿ ಸ್ಮರಣಾರ್ಥ ಅವರ ಪತ್ನಿ ಜಯಶ್ರೀ, ದಿ.ಕೆ.ವಿ.ಬಿಳಿರಾಯ ಸ್ಮರಣಾರ್ಥ ಅವರ ಪುತ್ರ ಸುರೇಶ ಬಿಳಿರಾಯ ಉಡುಪಿ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರದ ಮಾಜಿ ಶಾಸಕರಾದ ಎ.ಜಿ.ಕೊಡ್ಗಿ, ಅಪ್ಪಣ್ಣ ಹೆಗ್ಡೆ, ಉಡುಪಿಯ ಸೋಮಶೇಖರ ಭಟ್, ಗುಜ್ಜಾಡಿ ಪ್ರಭಾಕರ ನಾಯಕ್, ಯು.ಕೆ.ರಾಘವೇಂದ್ರ ರಾವ್,ಪ್ರೊ.ಎಂ.ಎಲ್.ಸಾಮಗ,ಮಲ್ಪೆ ಇವರಿಗೆ ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.