ಸಕಾಲ ಸೇವೆಯಡಿ ತೋಟಗಾರಿಕೆ ಇಲಾಖೆಯ ವಿವಿಧ ಸೇವೆ ಅಳವಡಿಕೆ
ಉಡುಪಿ, ಜನವರಿ 22, 2021: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ತೋಟಗಾರಿಕೆ ಇಲಾಖೆಯ ಮಣ್ಣು ವಿಶ್ಲೇಷಣೆ, ನೀರು ವಿಶ್ಲೇಷಣೆ, ಎಲೆ ವಿಶ್ಲೇಷಣೆ ಹಾಗೂ ಸಾವಯವ ವಿಶ್ಲೇಷಣೆ ಸೇವೆಗಳನ್ನು ಅಳವಡಿಸಲಾಗಿರುತ್ತದೆ.
ಈ ಸೇವೆಗಳನ್ನು ಪಡೆಯಲು ಇಚ್ಛಿಸುವ ರೈತರು ಹತ್ತಿರದ ಸೇವಾಸಿಂಧು ಕೇಂದ್ರಗಳ ಮುಖಾಂತರ https://serviceonline.gov.in/karnataka ತಂತ್ರಾಂಶದಲ್ಲಿ ನೊಂದಾಯಿಸಿ, ನಿಗಧಿತ ಶುಲ್ಕ ಪಾವತಿಸಿ, ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಿ, ಸಂಬಂಧಪಟ್ಟ ಮಾದರಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಸ್ಯ ಪೋಷಕಾಂಶ, ಜೈವಿಕ ಕೇಂದ್ರ, ಅಂಚೆ ಪೆಟ್ಟಿಗೆ ಸಂಖ್ಯೆ: 7648, ಹುಳಿಮಾವು, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು-560076 ವಿಳಾಸಕ್ಕೆ ಸಲ್ಲಿಸಬೇಕು.
ಮಾದರಿ ಸ್ವೀಕರಿಸಿದ ನಂತರ ನಿಗದಿತ ಅವಧಿಯೊಳಗೆ ವಿಶ್ಲೇಷಣಾ ವರದಿಯನ್ನು ಆನ್ಲೈನ್ನಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ
- ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ ದೂರವಾಣಿ ಸಂಖ್ಯೆ: 0820-2531950,
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ತಾಲೂಕು ದೂರವಾಣಿ ಸಂಖ್ಯೆ: 0820-2522837,
- ಕುಂದಾಪುರ ತಾಲೂಕು ದೂರವಾಣಿ ಸಂಖ್ಯೆ: 08254-230813,
- ಕಾರ್ಕಳ ತಾಲೂಕು ದೂರವಾಣಿ ಸಂಖ್ಯೆ: 08258-230288
ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Also read: Spices Board conducts Buyer Seller Meet for small cardamom
Recent post
- MAHE Unveils ‘COVID-19 Pandemic: Insights from Managing the Crisis in a Teaching Hospital’
- Today’s Rubber price (Kottayam and International market)
- Udupi Sri Krishna Alankara
- Honoring Dharti Aaba
- Arecanut and Pepper Price at TSS- Sirsi