ಅಂತರಾಳ

 ಅಂತರಾಳ
Share this post

ಹುರುಪು

ರೋದವನ್ನು ಕೇಳಲಲ್ಲಿ
ಹಾದು ಹೋಗುತಿದ್ದೆ ನಾನು
ಮಾದವನಿಹ ಗುಡಿಗೆ ನಡೆದೆ ಕಾಡ ನಡುವೆಯೇ|
ಹಾದಿಯಲ್ಲಿ ಕಲ್ಲು ಮುಳ್ಳು
ಕಾದು ತಾ ಸಹಾಯವರಸಿ
ಹಾದಿ ಮಧ್ಯೆ ಸಿಲುಕಿಕೊಂಡ ಬಾಲೆ ಕಮಲಿಯು||

ಕತ್ತಲಾಗುತಿರಲುಯಿಲ್ಲಿ
ಸುತ್ತ ಮುತ್ತ ವನ ಕುಟೀರ
ದತ್ತ ಕಂಡೆ ಮೃಗವು ಬರುತ ಲಿದ್ದುದಾಗಲು
ಮೆತ್ತಿ ಚೂಪು ಕಲ್ಲನೊಂದು
ಮೆತ್ತಗೆ ಹೊರ ತೆಗೆಯುತಿರಲು
ಹತ್ತಿರಕ್ಕೆ ತೆರಳಿಯವಳ ಮಾತನಾಡಿದೆ||

ಗೆಳೆಯರೊಡನೆ ಗುಡ್ಡ ಹತ್ತಿ
ಮಲೆಯ ಸುತ್ತ ನೋಡುತಿರಲು
ಬಲಿತ ಕುಂಜರಗಳ ಹಿಂಡು ಲಗ್ಗೆಯಿಟ್ಟಿತು|
ಮಳೆಯು ಸುರಿಯುತಿರಲು ಜತೆಗೆ
ಗೆಳೆಯ ಗುಂಪು ಹಳಿಯ ತಪ್ಪಿ
ತಳಿಸಿ ಹೋಗೆ ಚಾರಣಗಳ ಕನಸದವಳಲಿ||

ನೋವನರಿತೆ ಹೆಣ್ಣು ಮಗಳ
ಮಾವು ಫಲವ ಕೊಡುತಲಾಗ
ಯಾವ ಭಯವು ಬೇಡವೆನುತ ಹುರುಪು ತುಂಬಿದೆ|
ದೇವನಿರುವ ದೂರದಲ್ಲಿ
ಪಾವನವದು ನೋಡಲವನ
ಧಾವಿಸುತ್ತ ನಡೆದೆ ಗುಡಿಯಕಡೆಗೆ ತೆರಳುತ||

ಶ್ರೇಯಸ್ ಅಂತರ
ಫೈನಲ್ ಎಂ ಕಾಮ್
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು

Subscribe to our newsletter!

Other related posts

error: Content is protected !!