ಆಹಾರ ಪರವಾನಗಿ ಮತ್ತು ನೊಂದಾವಣಿಗೆ ಅರ್ಜಿ ಆಹ್ವಾನ

 ಆಹಾರ ಪರವಾನಗಿ ಮತ್ತು ನೊಂದಾವಣಿಗೆ ಅರ್ಜಿ ಆಹ್ವಾನ
Share this post

ಉಡುಪಿ, ಡಿಸೆಂಬರ್ 6 202: ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಆಹಾರ ಪರವಾನಗಿ / ನೊಂದಾವಣಿ ಪಡೆಯಲು ಆನ್‌ಲೈನ್ ಮೂಲಕ (https://foscos.fssai.gov.in) ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಇನ್ನಿತರ ಅನಧಿಕೃತ ವೆಬ್‌ಸೈಟ್‌ನಲ್ಲಿ ಆಹಾರ ಪರವಾನಗಿ / ನೊಂದಾವಣಿಗೆ ಅರ್ಜಿ ಸಲ್ಲಿಸಿರುವ ಆಹಾರ ವಹಿವಾಟುದಾರರು ಮೋಸ ಹೋಗಿ ಹಣ ಕಳೆದುಕೊಂಡಿರುವ ದೂರುಗಳು ಇಲಾಖೆಗೆ ಬಂದಿವೆ.

ಸಾರ್ವಜನಿಕರು ಆನ್‌ಲೈನ್ ವಂಚನೆಗೆ ಒಳಗಾಗದಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಟಿಬಿ ಆಫೀಸ್, ಅಜ್ಜರಕಾಡು, ಉಡುಪಿ ದೂರವಾಣಿ ಸಂಖ್ಯೆ: 0820-2522880 ನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಕಿತ ಹಾಗೂ ಆಹಾರ ಸುರಕ್ಷತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!