ಹಿಂಗಾರು ಬೆಳೆ ಸಮೀಕ್ಷೆ ಪ್ರಾರಂಭ
ಮಂಗಳೂರು, ಜನವರಿ 6, 2021: ಪ್ರಸ್ತುತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಖಾಸಗಿ ನಿವಾಸಿಗಳ ಮೂಲಕ ಜನವರಿ 1 ರಿಂದ ಪ್ರಾರಂಭವಾಗಿದೆ.
ಹಿಂಗಾರು ಹಂಗಾಮಿನ ಬೆಳೆ ವಿವರಗಳನ್ನು ಹಿಂಗಾರು ಬೆಳೆ ಸಮೀಕ್ಷೆ ಆಪ್‍ನಲ್ಲಿ ದಾಖಲಿಸಿ ಅಪ್‍ಲೋಡ್ ಮಾಡಲಾಗಿದೆ. ಬೆಳೆ ಮಾಹಿತಿ ಆಧಾರದ ಮೇಲೆ ಕನಿಷ್ಠ ಬೆಂಬಲ ನಿಗದಿ, ಬೆಳೆ ಪರಿಹಾರ-ಬೆಳೆ ವಿಮಾ ಯೋಜನೆ, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ಇತ್ಯಾದಿ ದಾಖಲಾತಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ.
ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ಸರ್ವೆ ನಂಬರ್‍ವಾರು ವಾರಸುದಾರರಾದ ರೈತರ ಆಧಾರ್ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ರೈತರು ಬೆಳೆ ಸಮೀಕ್ಷೆ ನಡೆಸುವ ಖಾಸಗಿ ನಿವಾಸಿಗಳಿಗೆ ತಮ್ಮ ಆಧಾರ್ ವಿವರವನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳು/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ತೋಟಗಾರಿಕಾ ಇಲಾಖೆಯ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.