ಜಾನಪದ ಅಕಾಡೆಮಿ ಪ್ರಶಸ್ತಿ ಪುರಸೃತರ ಪಟ್ಟಿ ಪ್ರಕಟ
ಮಂಗಳೂರು ಜನವರಿ 5, 2021: ಪ್ರಸ್ತುತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸೃತರ ವಿವರ ಇಂತಿವೆ:
ಗೊಂಬೆಕುಣಿತ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ಬಂಗೇರಾ ಮಧ್ವ,
ಕರಗ ಕೋಲಾಟ: ಉಡುಪಿ ಜಿಲ್ಲೆಯ ಕಲ್ಮಾಡಿ ಗ್ರಾಮದ ರಮೇಶ್ ಕಲ್ಮಾಡಿ
ಲಾವಣಿ ಪದ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಇಂದೂರ ಗ್ರಾಮದ ಸಹದೇವಪ್ಪ ಈರಪ್ಪಾನಡಗೇರಾ
ಜಾನಪದ ಗಾಯನ: ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದ ಎಂ.ಕೆ. ಸಿದ್ಧರಾಜು
ಸೋಬಾನೆಪದ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊನ್ನಸಂದ್ರದ ಹೊನ್ನಗಂಗಮ್ಮ
ತಮಟೆ ವಾದನ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಬ್ರಹ್ಮಣಿಪುರದ ತಿಮ್ಮಯ್ಯತಂದೆ
ಭಜನೆ ತತ್ವಪದ: ಕೋಲಾರ ಜಿಲ್ಲೆ ಹಾಗೂ ತಾಲೂಕಿನ ಮಲ್ಲನಾಯಕನ ಹಳ್ಳಿಯ ನಾಗಮಂಗಲದ ಕೆ.ಎನ್. ಚಂಗಪ್ಪ
ಕೀಲುಕುದುರೆ: ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕಿನ ಕೇತೇನ ಹಳ್ಳಿರಸ್ತೆಯ ನಾರಾಯಣಪ್ಪ
ವೀರಭದ್ರನ ಕುಣಿತ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಸಿ. ವಿ. ವೀರಣ್ಣ
ಸೋಬಾನೆ ಹಾಡುಗಾರಿಕೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿಯ ಭಾಗ್ಯಮ್ಮ
ಮದುವೆ ಹಾಡು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗೊಲ್ಲರ ಹಟ್ಟಿಯ ಕೆಂಚಮ್ಮ
ಜಾನಪದ ಹಾಡುಗಾರಿಕೆ: ಶಿವಮೊಗ್ಗದ ವಿನೋಬಾ ನಗರದ ಕೆ. ಯುವರಾಜು
ಕಂಸಾಳೆ ಹಾಡುಗಾರಿಕೆ: ಮೈಸೂರಿನ ವಿದ್ಯಾರಣ್ಯಪುರಂನ ಸುಯೋಜ ಫಾರಂ ರಸ್ತೆಯ ಕುಮಾರಸ್ವಾಮಿ
ಕೋಲಾಟ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದ ಭೂಮಿಗೌಡ
ಹಾಡುಗಾರಿಕೆ: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಂಚಮಾರನ ಹಳ್ಳಿಯ ಗ್ಯಾರಂಟಿ ರಾಮಣ್ಣ
ಚೌಡಿಕೆ ಪದ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೌಳ ಹಿರಿಯೂರು ಗ್ರಾಮದ ಭೋಗಪ್ಪ ಎಂ. ಸಿ
ಬೊಳೋ ಪಾಟ್: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಯವಕ ಪಾಡಿ ಗ್ರಾಮದ ಕೆ. ಕೆ. ಪೆÇನ್ನಪ್ಪ
ಸೋಬಾನೆ ಪದ: ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ಹೊನ್ನಮ್ಮ
ತತ್ವಪದ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುತ್ತಪ್ಪ ಅಲ್ಲಪ್ಪ ಸವದಿ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಲ್ಲೇಶಪ್ಪ ಫಕ್ಕೀರಪ್ಪ ತಡಸದ
ಡೊಳ್ಳಿನ ಹಾಡುಗಾರಿಕೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೀಡಿ ಗ್ರಾಮದ ಸುರೇಶ ರಾಮಚಂದ್ರ ಜೋಶಿ
ತತ್ವಪದ ಮತ್ತು ಭಜನೆ: ಬಾಗಲಕೋಟೆ ಜಿಲ್ಲೆಯ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ
ತತ್ವಪದ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕ್ಯಾಲಗೊಂಡ ಗ್ರಾಮದ ಬಸವರಾಜ ತಿರುಕಪ ಶಿಗ್ಗಾಂವಿ
ಪುರವಂತಿಕೆ: ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸಾಕೀನಭಲೇಹೊಸೂರಿನ ಮುತ್ತಪ್ಪ ರೇವಣಪ್ಪ ರೋಣ
ಹಲಗೆ ವಾದನ: ಕಲಬುರ್ಗಿ ತಾಲೂಕು ಹಾಗೂ ಜಿಲ್ಲೆಯ ಕಪನೂರು ಗ್ರಾಮದ ಸಾಯಬಣ್ಣ, ಚಕ್ರಿ ಭಜನೆಗೆ ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ವೈಜಿನಾಥಯ್ಯ ಸಂಗಯ್ಯ ಸ್ವಾಮಿ
ಹಗಲುವೇಷ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಂಬಣ್ಣ, ಗೋಂದಳಿಗರು ಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲುಕಿನ ತಾವರಗೇರಿಯ ತಿಪ್ಪಣ್ಣ ಅಂಬಾಜಿ ಸುಗತೇಕರ
ಗೋಂದಳಿ ಪದ: ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಗಳ್ಳಿ ತಾಲೂಕಿನ ಹಂಪಾಪಟ್ಟಣದ ಗೋಂದಳಿ ರಾಮಪ್ಪ,
ಮದುವೆ ಹಾಡಿ: ಯಾದಗಿರಿ ಜಿಲ್ಲೆಯ ಶಹಪೂರಾ ತಾಲೂಕಿನ ಗೋಗಿ ಬಸವ ಲಿಂಗಮ್ಮ, ಆಯ್ಕೆಯಾಗಿದ್ದಾರೆ.
ತಜ್ಞ ಪ್ರಶಸ್ತಿಯ ಡಾ. ಜೀ.ಶಂ.ಪಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಾಯತ್ರಿ ನಾವಡ, ಡಾ. ಗದ್ದಗೀಮಠ ಪ್ರಶಸ್ತಿಗೆ ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಸವರಾಜು ಸಬರದ ಆಯ್ಕೆಯಾಗಿದ್ದಾರೆ.