ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಭಂಡಾರಕೇರಿ ಮಠದಿಂದ ದೇಣಿಗೆ ಸಮರ್ಪಣೆ

 ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಭಂಡಾರಕೇರಿ ಮಠದಿಂದ ದೇಣಿಗೆ ಸಮರ್ಪಣೆ
Share this post

ಉಡುಪಿ, ಡಿಸೆಂಬರ್ 11, 2020: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರಕ್ಕೆ ₹ 1,00,108 ದೇಣಿಗೆಯನ್ನು ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಇಂದು ಬೆಂಗಳೂರಿನಲ್ಲಿ ಹಸ್ತಾಂತರಿಸಿದರು .

ಶ್ರೀ ಸತ್ಯತೀರ್ಥರು ಮೂಲಯತಿಗಳಾಗಿರುವ ಶ್ರೀ ಭಂಡಾರಕೇರಿ ಮಠವು ತನ್ನ ಪರಂಪರೆಯಲ್ಲಿ ಶ್ರೀ ಸುರೋತ್ತಮ ತೀರ್ಥರು ( ಶ್ರೀ ವಾದಿರಾಜ ತೀರ್ಥ ಗುರುಸಾರ್ವಭೌಮರ ಪೂರ್ವಾಶ್ರಮದ ಸಹೋದರ) ರೂ ಸೇರಿದಂತೆ ಹಲವಾರು ಮಹಾತಪಸ್ವಿಗಳನ್ನು ಕಂಡಿದೆ .

ಪೇಜಾವರ ಮಠದ ಆರಾಧ್ಯ ದೇವರು ಶ್ರೀ ರಾಮ ವಿಠ್ಠಲ. ವಿಶೇಷವೆಂದರೆ ಭಂಡಾರಕೇರಿ ಮಠದ ಆರಾಧ್ಯ ದೇವರು ಸೀತಾಲಕ್ಷ್ಮಣ ಸಹಿತ ಕೋದಂಡರಾಮದೇವರು .

Subscribe to our newsletter!

Other related posts

error: Content is protected !!