ಕೋವಿಡ್ ನಿಯಮ ಉಲ್ಲಂಘನೆ- ದಂಡ ವಿಧಿಸಲು ಅಧಿಕಾರಿಗಳ ನೇಮಕ
ಉಡುಪಿ, ಡಿ 02: ಕೋವಿಡ್ ನಿಯಮ ಉಲ್ಲಂಘನೆ- ದಂಡ ವಿಧಿಸಲು ಅಧಿಕಾರಿಗಳ ನೇಮಕ ಮಾಡಲಾಗಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ, ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಸರ್ಕಾರದ ಅಧಿಸೂಚನೆಯಲ್ಲಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರೂ.200 ಮತ್ತು ಇತರೆ ಕಡೆಗಳಲ್ಲಿ ರೂ 100 ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ
ಯಾವ ಅಧಿಕಾರಿ?
ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ನಗರಸಭೆ ಪೌರಾಯುಕ್ತರು, ನಗರಸಭೆ ಆರೋಗ್ಯ ನಿರೀಕ್ಷಕರು, ಕುಂದಾಪುರ ಉಪವಿಭಾಗಾಧಿಕಾರಿ, ಎಲ್ಲಾ ತಾಲೂಕಿನ ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಹಾಗೂ ಅವರ ಆರೋಗ್ಯ ನಿರೀಕ್ಷಕರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಎಲ್ಲಾ ಹೋಬಳಿಯ ರಾಜಸ್ವ ನಿರೀಕ್ಷಕರಿಗೆ, ಸಹಾಯಕ ಪೊಲೀಸ್ ಉಪನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರು ಹಾಗೂ ಮೇಲ್ಪಟ್ಟ ಅಬಕಾರಿ ಆಧಿಕಾರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಲಾಗಿರುತ್ತದೆ.
ಪ್ರಸ್ತುತ ಸಾರ್ವಜನಿಕರು ಕೋವಿಡ್ -19 ನಿಯಂತ್ರಣ ಸಂಬಂಧ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ವಿಷಯದಲ್ಲಿ ತೀರಾ ಅಸಡ್ಡೆ ವಹಿಸುತ್ತಿರುವುದನ್ನು ಗಮನಿಸಲಾಗಿದ್ದು, ಇದ್ದರಿಂದಾಗಿ ಕೋವಿಡ್ -19 ಮತ್ತೊಮ್ಮೆ ಹೆಚ್ಚಾಗುವ ಸಂಭವವಿದೆ.
ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಕೆಲವು ಅಧಿಕಾರಿಗಳನ್ನು ನೇಮಿಸಲಾಗಿದೆ:
- ಎಲ್ಲಾ ಮೀನುಗಾರಿಕ ಸಹಾಯಕ ನಿರ್ದೇಶಕರು ಶ್ರೇಣಿ 1 ಮತ್ತು 2 ಹಾಗೂ ಮೇಲ್ಪಟ್ಟ ಆಧಿಕಾರಿಗಳು,
- ಜಿಲ್ಲೆಯ ಎಲ್ಲಾ ಬಂದರು ಸಹಾಯಕ ನಿರ್ದೇಶಕರು ಶ್ರೇಣಿ 1 ಮತ್ತು 2 ಹಾಗೂ ಮೇಲ್ಪಟ್ಟ ಆಧಿಕಾರಿ,
- ಮಲ್ಪೆ ಹಾಗೂ ಕುಂದಾಪುರ ಉಪ ಬಂದರು ಸಂರಕ್ಷಣಾಧಿಕಾರಿ,
- ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕರು,
- ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ಸಾರಿಗೆ ಇಲಾಖೆಯ ಎಲ್ಲಾ ವಾಹನ ನಿರೀಕ್ಷಕರು,
- ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳು ಮತ್ತು
- ಕಾರ್ಯದರ್ಶಿಗಳು, ಕುಂದಾಪುರ, ಕಾರ್ಕಳ, ಉಡುಪಿಯ ಎ.ಪಿ.ಎಂ.ಸಿ
ಇವರಿಗೂ ಸಹ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಪರಿಷ್ಕರಿಸಿ ಆದೇಶಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.