ಡಿ. 4 ರಿಂದ ಬೆಂಗಳೂರಿಗೆ ನೂತನ ರಾಜಹಂಸ ಬಸ್ ಸಂಚಾರ ಆರಂಭ

 ಡಿ. 4 ರಿಂದ ಬೆಂಗಳೂರಿಗೆ ನೂತನ ರಾಜಹಂಸ ಬಸ್ ಸಂಚಾರ ಆರಂಭ
Share this post

ಉಡುಪಿ, ಡಿ 02: ಕರಾರಸಾ.ನಿಗಮದ ವತಿಯಿಂದ ಮಂಗಳೂರು-ಮೂಡಬಿದ್ರೆ-ಧರ್ಮಸ್ಥಳ-ಬೆಂಗಳೂರು ಮಾರ್ಗದಲ್ಲಿ ರಾತ್ರಿ ಸಾರಿಗೆಯಾಗಿ “ರಾಜಹಂಸ” ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 4 ರಿಂದ ಪ್ರಾರಂಭಿಸಲಾಗುತ್ತಿದೆ.  

ವಿಭಾಗದ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಂಗಳೂರಿಗೆ ವಯಾ ಕುಲಶೇಖರ-ವಾಮಂಜೂರು-ಗುರುಪುರ-ಕೈಕಂಬ-ಗಂಜಿಮಠ-ಎಡಪದವು-ಮೀಜಾರು-ತೋಡಾರು ಬಡಗಬೆಟ್ಟು-ಮೂಡಬಿದ್ರೆ-ವೇಣೂರು-ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಸಕಲೇಶಪುರ-ಹಾಸನ-ಚೆನ್ನರಾಯಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಇದೇ ಮಾರ್ಗವಾಗಿ ಮಂಗಳೂರು ತಲುಪಲಿದೆ.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು www.ksrtc.in ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸುವಂತೆ ಮಂಗಳೂರು  ಕರಾರಸಾಸಂ, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also read:

Subscribe to our newsletter!

Other related posts

error: Content is protected !!