ಉಡುಪಿ: ವಿವಿಧ ಕಾಮಗಾರಿ – ವಾಹನ ಸಂಚಾರ ನಿಷೇಧ

 ಉಡುಪಿ: ವಿವಿಧ ಕಾಮಗಾರಿ – ವಾಹನ ಸಂಚಾರ ನಿಷೇಧ
Share this post

ಉಡುಪಿ, ಡಿ 02: ಉಡುಪಿ ನಗರಸಭಾ ವ್ಯಾಪ್ತಿಯ ಗುಂಡಿಬೈಲು ರಸಿಕ ಬಾರ್‌ನಿಂದ ದೊಡ್ಡಣಗುಡ್ಡೆ ಜುಮಾದಿಕಟ್ಟೆವರೆಗೆ ಮ್ಯಾನ್‌ಹೋಲ್ ಸೋರಿಕೆಯಾಗುತ್ತಿರುವುದರಿಂದ ದುರಸ್ಥಿ ಪಡಿಸಲು ಹಾಗೂ ಒಳಚರಂಡಿ ಪೈಪ್‌ಲೈನ್ ಬದಲಾವಣೆ ಮಾಡಲು ರಸ್ತೆ ಅಗೆಯಬೇಕಾಗಿರುವುದರಿಂದ, ಡಿಸೆಂಬರ್ 3 ರಿಂದ 2021 ಜನವರಿ 2 ರ ವರೆಗೆ ಒಂದು ತಿಂಗಳ ಕಾಲ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿರುತ್ತದೆ.

ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!