ಉಡುಪಿ ರೈತಸಂತೆ – ನೋಂದಣಿಗೆ ಸೂಚನೆ

 ಉಡುಪಿ ರೈತಸಂತೆ – ನೋಂದಣಿಗೆ ಸೂಚನೆ
Share this post

ಉಡುಪಿ, ಡಿ 02: ಜಿಲ್ಲೆಯ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತಸಂತೆ ನಡೆಯಲಿದ್ದು, ರೈತ ಸಂತೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಹಾಗೂ ಇತರೆ ಯಾವುದೇ ರೈತ ಸಂಘ, ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ಅರ್ಜಿಯನ್ನು ಡಿಸೆಂಬರ್ 21 ರ ಒಳಗೆ

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ, ದೂ.ಸಂ:0820-2522837,
  • ಕುಂದಾಪುರ ದೂ. ಸಂ:08254-230813,
  • ಕಾರ್ಕಳ ದೂ.ಸಂ: 08258-230288,
  • ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ ದೂ.ಸಂ: 0820-2520590

ಈ ಕಛೇರಿಗಳಲ್ಲಿ ಪಡೆದು, ಫೋಟೋ, ಆಧಾರ್ ಕಾರ್ಡ್, ಪಹಣಿಯೊಂದಿಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!