ನ.29 ಪಣಂಬೂರು ಬೀಚ್‍ನಲ್ಲಿ ಸ್ವಚ್ಛತಾ ಅಭಿಯಾನ, ಪ್ರಾಣಾಯಾಮ ಮತ್ತು ಯೋಗ ಶಿಬಿರ

 ನ.29 ಪಣಂಬೂರು ಬೀಚ್‍ನಲ್ಲಿ ಸ್ವಚ್ಛತಾ ಅಭಿಯಾನ, ಪ್ರಾಣಾಯಾಮ ಮತ್ತು ಯೋಗ ಶಿಬಿರ
Share this post

ಮಂಗಳೂರು,ನ 26, 2020:  ದ.ಕ ಜಿಲ್ಲಾ ಗೃಹರಕ್ಷಕ ದಳ ಮತ್ತು ಜಿಲ್ಲಾ ಪೌರರಕ್ಷಣಾ ಪಡೆ  ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 29ರಂದು  ಪಣಂಬೂರು ಬೀಚ್‍ನಲ್ಲಿ ಸ್ವಚ್ಛತಾ ಅಭಿಯಾನ, ಪ್ರಾಣಾಯಾಮ ಮತ್ತು ಯೋಗ ಶಿಬಿರ ಅಭಿಯಾನದ 4ನೇ ಕಾರ್ಯಕ್ರಮವು ಪಣಂಬೂರು ಕಡಲ ತೀರದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 7 ರಿಂದ  8.30 ರವರೆಗೆ ಪ್ರಾಣಾಯಾಮ ಮತ್ತು ಯೋಗ ಶಿಬಿರ ಕಾರ್ಯಕ್ರಮ ಮತ್ತು ಬೆಳಗ್ಗೆ 9 ರಿಂದ 10 ರವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಯೋಗರತ್ನ ಗೋಪಾಲಕೃಷ್ಣ  ದೇಲಂಪಾಡಿ ಮಾರ್ಗದರ್ಶನ ನೀಡಲಿರುವರು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಜಿಲ್ಲಾ ಪೌರರಕ್ಷಣಾ ಪಡೆಯ ಮುಖ್ಯಪಾಲಕ  ಡಾ|| ಮುರಲೀ ಮೋಹನ್ ಚೂಂತಾರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!