ಪರವಾನಿಗೆದಾರರು ತಮ್ಮ 3ನೇ ಶಸ್ತ್ರಾಸ್ತ್ರಗಳ ವಿಲೇವಾರಿ ಅಥವಾ ಠೇವಣಿ ಮಾಡುವುದು ಕಡ್ಡಾಯ
ಮಂಗಳೂರು ನ 23: ಆತ್ಮ ರಕ್ಷಣೆ ಮತ್ತು ಕೃಷಿ ರಕ್ಷಣೆಗಾಗಿ ಅಧಿಕೃತ ಶಸ್ತ್ರಾಸ್ತ್ರ ಪರವಾನಿಗೆದಾರರು ತಮ್ಮ ಶಸ್ತ್ರಾಸ್ತ್ರ ಪರವಾನಿಗೆಯಲ್ಲಿನ 3ನೇ ಆಯುಧವನ್ನು ಹೊಂದಲು ಅವಕಾಶವಿರುವುದಿಲ್ಲ ಮತ್ತು ತಮ್ಮ ಶಸ್ತ್ರಾಸ್ತ್ರ ಪರವಾನಿಗೆಯಲ್ಲಿ ಗರಿಷ್ಠ 2 ಶಸ್ತ್ರಾಸ್ತ್ರವನ್ನು ಹೊಂದಲು ಮಾತ್ರ ಅವಕಾಶವಿರುತ್ತದೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ 3ನೇ ಶಸ್ತ್ರಾಸ್ತ್ರವನ್ನು ಡಿಸೆಂಬರ್ 13 ರೊಳಗೆ ಹತ್ತಿರದ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡತಕ್ಕದ್ದು ಹಾಗೂ ಶಸ್ತ್ರಾಸ್ತ್ರವನ್ನು ಮಾರಾಟ ಮಾಡುವ ಮೂಲಕ ವಿಲೇವಾರಿ ಮಾಡತಕ್ಕದ್ದು ಎಂದು ದ.ಕ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಲ್ಲಂಘನೆಯಾದಲ್ಲಿ ಅಂತಹ ಪರವಾನಿಗೆದಾರರ ವಿರುದ್ದ ಶಸ್ತ್ರಾಸ್ತ್ರ ಕಾನೂನು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು.
ಆಯುಧ ಪರವಾನಿಗೆ ಕೋರಿ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆನ್ಲೈನ್ ಮುಖಾಂತರ www.mha.gov.in ರಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದ.ಕ ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂಖ್ಯೆ: 0824-2220590 ಅಥವಾ ಟೋಲ್ ಫ್ರೀ ನಂ 1077 ಸಂಪರ್ಕಿಸಿ ಮಾಹಿತಿ ಪಡೆಯುವಂತೆ ದ.ಕ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Also read: Focus Canara: Renaming politics or development?
Recent news:
- Today’s Rubber price at Rubber Society- Ujire
- Kateel Sri Durgaparameshwari today’s Alankara
- Kateel Mela Yakshagana details
- Daily Panchangam
- Sri Dharmasthala Mela Yakshagana show today