ಇನ್ಕ್ಯುಬೇಷನ್ ಕಾರ್ಯಕ್ರಮ – ಅರ್ಜಿ ಆಹ್ವಾನ
ಉಡುಪಿ, ನ 11: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್, ಧಾರವಾಡ) ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರ ಪುರಸ್ಕೃತ ಸಂಕಲ್ಪ ಯೋಜನೆ ಅಡಿಯಲ್ಲಿ ಇನ್ಕ್ಯುಬೇಷನ್ ಪ್ರೋಗ್ರಾಮ್ ಮೂಲಕ ಹೊಸ ಉದ್ಯಮ ಸ್ಥಾಪಿಸುವವರಿಗೆ ನವೆಂಬರ್ ನಾಲ್ಕನೇ ವಾರದಲ್ಲಿ ಉಚಿತವಾಗಿ 6 ದಿನಗಳ ಸಂಕಲ್ಪ ಇನ್ಕ್ಯುಬೇಷನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಜಂಟಿ ನಿರ್ದೇಶಕರು, ಸಿಡಾಕ್, ಮೊದಲನೆಯ ಮಹಡಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಅಲೆವೂರು ರಸ್ತೆ, ಶಿವಳ್ಳಿ, ಮಣಿಪಾಲ, ಉಡುಪಿ ಕಛೇರಿಗೆ ಸಲ್ಲಿಸಬೇಕು ಅಥವಾ ಪ್ರಥ್ವಿರಾಜ್ ನಾಯಕ್ ಮೊಬೈಲ್ ಸಂಖ್ಯೆ :8217530146 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.