ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ
ಮಂಗಳೂರು ನ 06:- ಬೆಳ್ತಂಗಡಿ ಘಟಕದ ಗೃಹರಕ್ಷಕ ವಿನೋದ್‍ರಾಜ್ ಆಳ್ವ ಇವರಿಗೆ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ನವೆಂಬರ್ 6 ರಂದು ದ.ಕ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಠ ಡಾ: ಮುರಲೀ ಮೋಹನ್ ಚೂಂತಾರು ರವರು ವೈದ್ಯಕೀಯ ಸಹಾಯ ಧನ ಚೆಕ್‍ನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಗೃಹರಕ್ಷಕರಿಗೂ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿ ಇದ್ದು, ಗೃಹರಕ್ಷಕರ ಮಕ್ಕಳ ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಹಾಯ ಧನ ನೀಡಲಾಗುತ್ತದೆ.
ಪ್ರತಿ ಗೃಹರಕ್ಷಕರೂ ವರ್ಷಕ್ಕೆ ರೂ. 50 ರಂತೆ ವಂತಿಕೆಯನ್ನು ಪಾವತಿಸಿದ್ದಲ್ಲಿ ಹಾಗೂ ಶೇಕಡಾ 60 ರಷ್ಟು ಕವಾಯತಿಗೆ ಹಾಜರಾಗಿದ್ದಲ್ಲಿ ಅಂತಹ ಗೃಹರಕ್ಷಕರು ಈ ಸೌಲಭ್ಯಕ್ಕಾಗಿ ಅರ್ಹರಾಗಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ, ಮೀನಾಕ್ಷಿ ಹಾಗೂ ಗೃಹರಕ್ಷಕರಾದ ಸುನಿಲ್ ಕುಮಾರ್, ದಿವಾಕರ್, ಸುನಿಲ್, ಮಹೇಶ್, ದುಶ್ಯಂತ್ ರೈ ಮತ್ತು ಸುಲೋಚನ ಶೆಟ್ಟಿ ಉಪಸ್ಥಿತರಿದ್ದರು.