ಅಂಚೆ ಕಚೇರಿಗಳಲ್ಲಿ ಅ.6 ರಂದು ಆಧಾರ್ ಅಭಿಯಾನ
ಉಡುಪಿ ಅ 04: ಉಡುಪಿ ಅಂಚೆ ವಿಭಾಗವು ಅಕ್ಟೋಬರ್ 6 ರಂದು ಉಡುಪಿ ಅಂಚೆ
ವಿಭಾಗದ ಅಂಚೆ ಕಚೇರಿಗಳಲ್ಲಿ ಆಧಾರ್ ಅಭಿಯಾನವನ್ನು ಹಮ್ಮಿಕೊಂಡಿದೆ.
ಆಯ್ದ ಅಂಚೆ ಕಚೇರಿಗಳಲ್ಲಿ ಗರಿಷ್ಟ 150 ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದ್ದು, ಪ್ರತೀ ಕಚೇರಿಯಲ್ಲಿ ಬೆಳಿಗ್ಗ 8 ರಿಂದ ಆಧಾರ್ ಅಭಿಯಾನ ಆರಂಭವಾಗಲಿದೆ. ಆಸಕ್ತರು ಮುಂಗಡ ಟೋಕನ್ ಪಡೆದುಕೊಂಡು ನಿಗದಿತ ಸಮಯಕ್ಕೆ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಸಂಬಂಧಿತ ಸೇವೆಯನ್ನು ಪಡೆದುಕೊಳ್ಳಬಹುದು.
ಆಧಾರ್ ಅಭಿಯಾನ ನಡೆಯುವ ಅಂಚೆ ಕಚೇರಿಗಳು:
- ಉಡುಪಿ ಪ್ರಧಾನ ಅಂಚೆ ಕಚೇರಿ
- ಕುಂದಾಪುರ ಪ್ರಧಾನ ಅಂಚೆ ಕಚೇರಿ
- ಪಡುಬಿದ್ರೆ
- ಬ್ರಹ್ಮಾವರ
- ಬಸ್ರೂರು
- ಕೊಲ್ಲೂರು
- ಅಂಬಲಪಾಡಿ
- ಕ್ರೋಡಾಶ್ರಮ
- ಶಂಕರಪುರ
- ತಲ್ಲೂರು
- ಮಿಷನ್ ಕಾಂಪೌಂಡ್
- ಕೊಕ್ಕರ್ಣೆ
- ಹಂಗಾರಕಟ್ಟೆ
- ಎರ್ಮಾಳು
- ಮಣಿಪಾಲ ಪ್ರಧಾನ ಅಂಚೆ ಕಚೇರಿ
- ಕಾಪು
- ಕೋಟೇಶ್ವರ
- ಬೈಂದೂರು
- ಗಂಗೊಳ್ಳಿ
- ಪರ್ಕಳ
- ಸಾಲಿಗ್ರಾಮ
- ಹೆಜಮಾಡಿ
- ಹಿರಿಯಡ್ಕ
- ಪಿಲಾರು
- ಕೆಮ್ಮಣ್ಣು
- ಪೆರ್ಡೂರು
- ಉಡುಪಿ ಕೋರ್ಟ್
- ಕಟಪಾಡಿ
- ಶಿರ್ವ
- ಉದ್ಯಾವರ
- ಕುಂಜಿಬೆಟ್ಟು
- ವಂಡ್ಸೆ
- ಸಿದ್ಧಾಪುರ
- ಬಾರ್ಕೂರು
- ಶಂಕರನಾರಾಯಣ
- ತ್ರಾಸಿ
- ಉಚ್ಚಿಲ
- ಕಂಬದಕೋಣೆ
- ಸಾಸ್ತಾನ
- ಶೀರೂರು
- ಕಲ್ಯಾಣಪುರ
ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದೆ.
ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್, ಸ್ಯಾನಿಟೈಸರ್ ಉಪಯೋಗದೊಂದಿಗೆ ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಂಡು ಆಧಾರ್ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.