ಕೃಷಿ ಹೊಂಡ ಹೊಂದಿದವರಿಗೆ ಉಚಿತ ಮೀನಿನ ಮರಿ ವಿತರಣೆ
![ಕೃಷಿ ಹೊಂಡ ಹೊಂದಿದವರಿಗೆ ಉಚಿತ ಮೀನಿನ ಮರಿ ವಿತರಣೆ](https://thecanarapost.com/wp-content/uploads/2020/09/water-1246669_640.jpg)
ಕಾರವಾರ ಸೆ 28 : ತಾಲೂಕಿನನಲ್ಲಿ ಕೃಷಿ ಹೊಂಡ ಇರುವ ರೈತರಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ2) ಅವರ ಕಚೇರಿಯಲ್ಲಿ ಉಚಿತವಾಗಿ 250 ಮೀನಿನ ಮರಿಗಳನ್ನು ನೀಡಲಾಗುತ್ತಿದೆ.
ಆಸಕ್ತ ಕೃಷಿಕರು ಅಕ್ಟೋಬರ್ 10ರೊಳಗಾಗಿ ತಮ್ಮ ಕೃಷಿ ಹೊಂಡದ ಆರ್.ಟಿ.ಸಿ ಹಾಗೂ ಆಧಾರ ಕಾರ್ಡ ನಕಲು ಪ್ರತಿಯೊಂದಿಗೆ ಮೀನುಗಾರಿಕೆ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ2) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.