ಕೊರೋನಾ ನೆಪದಲ್ಲಿ ದೇಶದ ಸಂಪತ್ತು ಲೂಟಿ: ಸುನಿಲ್ ಕುಮಾರ್ ಬಜಾಲ್

 ಕೊರೋನಾ ನೆಪದಲ್ಲಿ ದೇಶದ ಸಂಪತ್ತು ಲೂಟಿ: ಸುನಿಲ್ ಕುಮಾರ್ ಬಜಾಲ್
Share this post

ಮಂಗಳೂರು ಆ 26: ಭಯ ಬೇಡ,ಜಾಗ್ರತಿ ಇರಲಿ ಎಂದು ಅಬ್ಬರಿಸುವ ಕೇಂದ್ರ ಸರಕಾರವು ವಾಸ್ತವದಲ್ಲಿ ಮಾಧ್ಯಮಗಳ ಮೂಲಕ ಭಯದ ವಾತಾವರಣವನ್ನು ಸ್ರಷ್ಠಿಸಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಇದೇ ಸಂಧರ್ಭವನ್ನು ದುರುಪಯೋಗಪಡಿಸಿ ದೇಶದ ಅಮೂಲ್ಯ ಸಂಪತ್ತಾದ ವಿಮಾನ ನಿಲ್ದಾಣ,ರೈಲ್ವೇ,ಬಿ ಎಸ್ ಏನ್ ಎಲ್ ,ಬ್ಯಾಂಕ್, ವಿಮೆ,ಕಲ್ಲಿದ್ದಲು ಮುಂತಾದುವುಗಳನ್ನು ಮಾರಾಟ ಮಾಡಲು ಕುತಂತ್ರ ಹಣೆದಿದೆ ಎಂದು ಸಿ ಪಿ ಐ ಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.


ಅವರು ಸಿ ಪಿ ಐ ಎಂ ನೇತ್ರತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಉರ್ವಾಸ್ಟೋರಿನಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು. ಸಿ ಪಿ ಐ ಎಂ ನಾಯಕರಾದ ಮನೋಜ್ ಕುಲಾಲ್ ಮಾತನಾಡುತ್ತಾ ಕೋರೋನಾ ನಿಗ್ರಹಿಸುವಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡ ಕೇಂದ್ರ ಸರಕಾರವು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಚೈನಾ ವಿರುದ್ದ ಯುದ್ಧದ ಉನ್ಮಾದವನ್ನು ಸ್ರಷ್ಠಿಸಿತು. ರಫೇಲ್ ಹಗರಣದಲ್ಲಿ ಕೋಟ್ಯಾಂತರ ರೂ.ಹಣ ಭ್ರಷ್ಟಾಚಾರ ನಡೆಸಿದ್ದರೂ, ಯುದ್ದ ಸಾಮಾಗ್ರಿಗಳನ್ನು ತರುವಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.ಒಟ್ಟಿನಲ್ಲಿ ಜನರ ಬದುಕಿಗೆ ತಿಲಾಂಜಲಿಯನ್ನಿಟ್ಟು, ಕೊರೋನಾವನ್ನು ಹತ್ತಿಕ್ಕುವಲ್ಲಿ ನರೇಂದ್ರ ಮೋದಿ ಮಹಾತ್ಸಾಧನೆ ಮಾಡಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಹಸಿ ಹಸಿ ಸುಳ್ಳನ್ನು ಹರಿಯಬಿಡಲಾಯಿತು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿ ಪಿ ಐ ಎಂ ಸ್ಥಳೀಯ ನಾಯಕರಾದ ಕಿಶೋರ್,ರಾಜೇಶ್ ಕುಲಾಲ್,ರಘುವೀರ್, 
ಡಿ ವೈ ಎಫ್ ಐ  ನಾಯಕರಾದ ಪ್ರಶಾಂತ್ ಎಂ,ಬಿ,ನಾಗೇಂದ್ರ, ಸನತ್, ಸುಕೇಶ್,ಇಕ್ಬಾಲ್,
ಸಿ ಐ ಟಿ ಯು ನಾಯಕರಾದ ಶ್ಯಾಮುವೆಲ್ ಟೈಟಸ್,ದಿನೇಶ್ ಶ್ರೀಯಾನ್, ಮಹಿಳಾ ನಾಯಕರಾದ ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!