ಇತರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪರಿಷ್ಕ್ರತ ಶಿಷ್ಟಾಚಾರ
ಮಂಗಳೂರು, ಆ 24: ಇತ್ತೀಚೆಗೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಅನ್ಲಾಕ್ -೩ ಗಾಗಿ ಹೊರಡಿಸಲಾದ ಮಾರ್ಗಸೂಚಿಗಳನ್ವಯ (ಉಲ್ಲೇಖ- ೩ ಮತ್ತು ೪) ವ್ಯಕ್ತಿಗಳ ಮತ್ತು ಸರಕುಗಳ ಅಂತರ- ರಾಜ್ಯ ಚಲನೆಗೆ ಕುರಿತಾಗಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಈ ಹಿನ್ನಲೆಯಲ್ಲಿ ಮತ್ತು ಪ್ರಸ್ತುತ ಪರಿಸ್ಥಿತಿಗಳಲ್ಲಿ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ನೀಡಲಾಗಿದೆ।.
ಈ ಕೆಳಗಿನ ಅಂಶಗಳನ್ನು ಒಳಗೊಂಡಂತೆ ಅಂತರ ರಾಜ್ಯ ರಾಯಣಕ್ಕೆ ಸಂಭಧಿಸಿದಂತೆ ಹಿಂದಿನ ಎಲ್ಲಾ ಸುತ್ತೋಲೆ ರದ್ದುಗೊಳಿಸಲಾಗಿದೆ
- ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡುವುದು
- ರಾಜ್ಯದ ಗಾಡಿಗಳು ಬಸ್ ನಿಲ್ದಾಣಗಳು ರೈಲ್ವೆ ಹಾಗು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ
- ಜಿಲ್ಲೆಯ ಸ್ವೀಕರಿಸುವ ಕೇಂದ್ರಗಳಲ್ಲಿ ತಪಾಸಣೆ
- ಪ್ರಯಾಣಿಕರ ವರ್ಗಿಕರಣ
- ಕೈಗಳ ಮೇಲೆ ಮುದ್ರೆ ಹಾಕುವುದು
- ೧೪ ದಿನಗಳ ಕ್ವಾರಂಟೈನ್
- ಬೇರ್ಪಡಿಸುವಿಕೆ ಹಾಗೂ ಪರೀಕ್ಷಿಸುವಿಕೆ
- ಮನೆಯ ಬಾಗಿಲಿಗೆ ಪೋಸ್ಟರ್ ಹಚ್ಚುವುದು ನೆರೆಹೊರೆಯವರಿಗೆ / ನಿವಾಸ ಕಲ್ಯಾಣ ಸಂಘ।/ ಅಪಾರ್ಟ್ಮೆಂಟ್ ಮಾಲೀಕರ ಸಂಘಗಳಿಗೆ ಮಾಹಿತಿ ಪಂಚಾಯತ್/ ವಾರ್ಡ್ ಮಟ್ಟದ ತಂಡಗಳಿಂದ ಮೇಲ್ವಿಚಾರಣೆ ಫ್ಲೈಯಿಂಗ್ ಸ್ಕ್ವಾಡ್ IVRSL ಕಾಲ್ ಸೆಂಟರ್ ಹೊರಹೋಗುವ ಕರೆಗಳು ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ನ ಮುಖೇನ ಮೇಲ್ವಿಚಾರಣೆ ಸೇರಿದಂತೆ ಮನೆ ಸಂಪರ್ಕ ತಡೆಯನ್ನು ಜಾರಿಗೊಳಿಸುವುದು.
ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಈ ಕೆಳಗಿನ ಸೂಚನೆ ನೀಡಲಾಗಿದೆ:
1. ಕೋವಿಡ್-೧೯: ಲಕ್ಷಣ ಇಲ್ಲದಿದ್ದರೆ: ರಾಜ್ಯಕ್ಕೆ ಬರುವ ವೇಳೆ ಕೋವಿಡ್ ಲಕ್ಷಣ ಇಲ್ಲದಿದ್ದರೆ ೧೪ ದಿನಗಳ ಕ್ವಾರಂಟೈನ್ ಅಗತ್ಯವಿರುವುದಿಲ್ಲ ಹಾಗು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು.
ಆದರೆ ಅವರು ೧೪ ದಿನಗಳವರೆಗೆ ಕೋವಿಡ್ ಲಕ್ಷಣಗಳಾದ ಜ್ವರ ಕೆಮ್ಮು ಶೀತ ಗಂಟಲು ನೋವು ಉಸಿರಾಟದ ತೊಂದರೆ ಇತ್ಯಾದಿ ಸ್ವಯಂ ನಿಗಾ ಅಹಿಸುವುದು. ಈ ವೇಳೆ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯಕೀಯ ಸಮಾಲೋಚನೆ ಪಡೆಯುವುದು ಅಥವಾ ಆಪ್ತಮಿತ್ರ ಸಹಾಯವಾಣಿ ೧೪೪೧೦ ಗೆ ಕರೆ ಮಾಡುವುದು.
2. ಕೋವಿಡ್ ಲಕ್ಷಣ ಇದ್ದರೆ : ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರಬೇಕು ಮತ್ತು ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಅಥವಾ ಆಪ್ತಮಿತ್ರ ಸಹಾಯವಾಣಿಗೆ ಗೆ ಕರೆ ಮಾಡುವುದು.